‘ಮೊಹ್ರಾ’ ಚಲನಚಿತ್ರದ ‘ಟಿಪ್ ಟಿಪ್ ಬರ್ಸಾ ಪಾನಿ’ ಬಾಲಿವುಡ್‌ನ ಪ್ರಸಿದ್ಧ ಮಳೆ ಹಾಡುಗಳ ಪಟ್ಟಿಯಲ್ಲಿ ಒಂದು. ಈ ಹಾಡು ಬಾಯಿಯಲ್ಲಿ ಗುನುಗಿದಾಕ್ಷಣ ಹಳದಿ ಸೀರೆಯಲ್ಲಿ, ಮಳೆಯಲ್ಲಿ ನೆನೆಯುತ್ತ ನಾಯಕನನ್ನು ಒಲಿಸಿಕೊಳ್ಳುವ ನಾಯಕಿ ರವೀನಾ ಟಂಡನ್ ಹಾಗೂ ಅಕ್ಷಯ್‌ಕುಮಾರ್ ನೆನಪಾಗುತ್ತಾರೆ. ಈಗ ಈ ಹಾಡನ್ನು ತನ್ನ ನಿರ್ದೇಶನದ ‘ಸೂರ್ಯವಂಶಿ’ಯಲ್ಲಿ ರಿಮಿಕ್ಸ್ ಮಾಡಲು ರೋಹಿತ್ ಶೆಟ್ಟಿ ಮುಂದಾಗಿದ್ದಾರೆ.

‘ಸೂರ್ಯವಂಶಿ’ ನಾಯಕನಟ ಅಕ್ಷಯ್ ಕುಮಾರ್ ಈ ವಿಚಾರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ‘ಟಿಪ್ ಟಿಪ್ ಬರ್ಸಾ ಪಾನಿ ಹಾಡನ್ನು ಬೇರೆ ಯಾವ ನಟ ರಿಮಿಕ್ಸ್ ಮಾಡಿದ್ದರೂ ನನಗೆ ತುಂಬಾ ಬೇಸರವಾಗುತ್ತಿತ್ತು. ಈ ಹಾಡು ನನಗೆ ವೈಯಕ್ತಿಕವಾಗಿ ಹಾಗೂ ನನ್ನ ಸಿನಿಕೆರಿಯರ್‌ನಲ್ಲಿ ಬಹಳ ಹತ್ತಿರವಾದುದು’ ಎಂದು ಹೇಳಿಕೊಂಡಿದ್ದಾರೆ.

ಒಂದು ಕಡೆ ಈ ಹಾಡನ್ನು ರಿಮಿಕ್ಸ್ ಮಾಡುವ ನಿರ್ಧಾರವನ್ನು ಬಾಲಿವುಡ್ ಸ್ವಾಗತಿಸಿದರೆ, ಖ್ಯಾತ ಗೀತರಚನೆಕಾರ ಜಾವೇದ್ ಅಖ್ತರ್ ಇದನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ. ‘ಇದು ಕೃತಿಸ್ವಾಮ್ಯ ಉಲ್ಲಂಘನೆ’ ಎಂದು ಹೇಳಿರುವ ಅವರು, ‘ಇಂತಹ ಕೆಲಸಗಳು ನಿಲ್ಲಬೇಕು. ಈ ಹಿಂದೆ ಇಂತಹ ಪ್ರಯತ್ನಗಳು ನಡೆದಾಗ ನಾನು ಕಾನೂನು ಮೂಲಕ ವಿರೋಧಿಸಿದ್ದೆ. ಅವರಿಗೆ ನೋಟಿಸ್‌ಗಳನ್ನು ಕೂಡ ನೀಡಿದ್ದೆ. ಇಂತಹ ಖ್ಯಾತ ಹಾಡುಗಳ ಸಾಹಿತ್ಯವನ್ನು ಬದಲಾಯಿಸುವ ಪರಿಪಾಠ ಈಗ ಹೆಚ್ಚಾಗಿದೆ’ ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ.

ಈ ಹಾಡಿನಲ್ಲಿ ನಟಿಸಿರುವ ರವೀನಾ ಟಂಡನ್ ‘ರಿಮಿಕ್ಸ್ ಮಾಡಿದರೆ ಚೆನ್ನಾಗಿರುತ್ತದೆ. ನನಗೆ ಹೊಸ ರಿಮಿಕ್ಸ್ ಹಾಡುಗಳು ಇಷ್ಟ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.