ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಮುಲ ಸಿನಿಮಾದಲ್ಲಿ ಡಿಂಪಲ್

Last Updated 31 ಮಾರ್ಚ್ 2019, 19:30 IST
ಅಕ್ಷರ ಗಾತ್ರ

‘ಗಲ್ಫ್’ ಸಿನಿಮಾ ಖ್ಯಾತಿಯ ಡಿಂಪಲ್ ಹಯಾತಿ ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್‌ನಲ್ಲಿ ಶೇಖರ್ ತಮ್ಮ ಹೊಸ ಚಿತ್ರದ ಪೂಜಾ ಕಾರ್ಯ ನೇರವೇರಿಸಿದ್ದರು. ಆದರೆ, ಸಿನಿಮಾದ ಹೆಸರು ಮತ್ತು ನಾಯಕಿ ಯಾರು ಅನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಿಲ್ಲ. ಈಗ ಸಿನಿಮಾ ತಂಡ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದು, ನಾಯಕಿ ಪಾತ್ರಕ್ಕೆ ಡಿಂಪಲ್ ಆಯ್ಕೆ ಮಾಡಲಾಗಿದೆ. ಈಗಾಗಲೇ ‘ದೇವಿ 2’ ಮತ್ತು ‘ಎನ್‌ಜಿಕೆ’ ಎರಡು ಸಿನಿಮಾಗಳು ಡಿಂಪಲ್ ಕೈಯಲ್ಲಿದ್ದು, ‘ಗಲ್ಫ್‌’ ನಂತರ ಡಿಂಪಲ್ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

‘ಡಾಲರ್ ಡ್ರೀಮ್ಸ್’ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಶೇಖರ್ ಕಮ್ಮುಲ ಆ ಸಿನಿಮಾಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿಯನ್ನೂ ಪಡೆದಿದ್ದರು. ‘ಆನಂದ್’, ‘ಹ್ಯಾಪಿ ಡೇಸ್‌’, ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾಗಳ ಮೂಲಕ ಚಿತ್ರರಸಿಕರ ಮನ ಗೆದ್ದಿರುವ ಕಮ್ಮುಲ ಅವರ ಮುಂದಿನ ಚಿತ್ರ ಹೇಗಿರುತ್ತದೆ ಎನ್ನುವ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT