ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಶೂಟಿಂಗ್‌ ಮುಕ್ತಾಯ

7

ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಶೂಟಿಂಗ್‌ ಮುಕ್ತಾಯ

Published:
Updated:
Prajavani

ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನದ ಬಹುನಿರೀಕ್ಷಿತ ‘ಉದ್ಘರ್ಷ’ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಈಗಾಗಲೇ, ಎಡಿಟಿಂಗ್ ಕೂಡ ಮುಗಿಸಿರುವ ದೇಸಾಯಿ ಅವರು ಕುಂಬಳಕಾಯಿ ಒಡೆದಿದ್ದಾರೆ.

ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ತಮಿಳಿನಲ್ಲಿ ಇದಕ್ಕೆ ‘ಉಚ್ಚಕಟ್ಟಮ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿರುವುದು ಮಡಿಕೇರಿಯಲ್ಲಿ. ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

‘ಸಿಂಗಂ 3’ ಖ್ಯಾತಿಯ ಠಾಕೂರ್ ಅನೂಪ್ ಸಿಂಗ್ ನಾಯಕ ನಟರಾಗಿ ನಟಿಸಿದ್ದಾರೆ. ತಮಿಳಿನ ‘ಕಬಾಲಿ’ ಚಿತ್ರದ ಖ್ಯಾತಿಯ ಧನ್ಸಿಕಾ ಹಾಗೂ ಯುವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಖಳನಟ ಕಬೀರ್‌ಸಿಂಗ್ ದುಹಾನ್, ತೆಲುಗಿನ ‘ಬಾಹುಬಲಿ’ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಹುಭಾಷಾ ತಾರೆ ಕಿಶೋರ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಪಿ. ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದೆ. ಹಿಂದಿಯ ಸಂಗೀತ ನಿರ್ದೇಶಕ ಸಂಜೋಯ್ ಚೌಧುರಿ ಸಂಗೀತ ನೀಡಿದ್ದಾರೆ. ಆರ್. ದೇವರಾಜ್ ಆರ್ಥಿಕ ಇಂಧನ ಒದಗಿಸಿದ್ದಾರೆ. ರಾಜೇಂದ್ರ ಹಾಗೂ ಡಿ. ಮಂಜುನಾಥ್ ಸಹ ನಿರ್ಮಾಪಕರಾಗಿದ್ದು, ಡಿ. ಕ್ರಿಯೇಷನ್ಸ್ ಬ್ಯಾನರ್‌ ಅಡಿ ಚಿತ್ರ ಮೂಡಿಬಂದಿದೆ. 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !