ನಾಳೆ ಉದ್ಘರ್ಷ ಟ್ರೇಲರ್‌ ಬಿಡುಗಡೆ

ಮಂಗಳವಾರ, ಮಾರ್ಚ್ 26, 2019
23 °C

ನಾಳೆ ಉದ್ಘರ್ಷ ಟ್ರೇಲರ್‌ ಬಿಡುಗಡೆ

Published:
Updated:
Prajavani

ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರದ ಟ್ರೇಲರ್ ಮಾರ್ಚ್‌ 5ರಂದು ಸಂಜೆ ಬಿಡುಗಡೆಯಾಗಲಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳ ಭಾಷೆಯಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ಅಂದಹಾಗೆ ಟ್ರೇಲರ್‌ಗೆ ಧ್ವನಿ ನೀಡಿರುವುದು ನಟ ಸುದೀಪ್. ನಾಲ್ಕು ಭಾಷೆಯಲ್ಲೂ ಕಿಚ್ಚನ ಧ್ವನಿಯೇ ಅನುರಣಿಸಲಿದೆಯಂತೆ.

ನಟ ದರ್ಶನ್ ಅವರು ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ. ಈ ಸ್ಟಾ‌ರ್‌ ನಟಬ್ಬರನ್ನು ತಮ್ಮ ಸಿನಿಮಾ ಮೂಲಕ ಒಂದೇ ವೇದಿಕೆಗೆ ತಂದ  ಕೀರ್ತಿಗೆ ಸುನಿಲ್ ಕುಮಾರ್ ದೇಸಾಯಿ ಪಾತ್ರರಾಗಿದ್ದಾರೆ.

ಠಾಕೂರ್ ಅನೂಪ್ ಸಿಂಗ್ ಈ ಚಿತ್ರದ ನಾಯಕ. ತಾನ್ಯಾ ಹೋಪ್, ಧನ್ಸಿಕಾ ನಾಯಕಿಯರಾಗಿ ಅಭಿನಯಿಸಿದ್ದಾರೆ. ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ತಾರಾಗಣದಲ್ಲಿದ್ದಾರೆ. ಜೊತೆಗೆ ವಂಶಿ ಕೃಷ್ಣ, ಕನ್ನಡಿಗ ಕಿಶೋರ್, ನಟಿ ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

ದಿವಂಗತ ವಿಷ್ಣುವರ್ಧನ್ ಹಾಗೂ ಖ್ಯಾತ ಛಾಯಾಗ್ರಹಕ ಪಿ. ರಾಜನ್ ಅವರ ಛಾಯಾಗ್ರಹಣವಿದೆ. ಸಂಗೀತ ಸಂಯೋಜಿಸಿರುವುದು ಬಾಲಿವುಡ್‌ ಖ್ಯಾತಿಯ ಸಂಜೋಯ್ ಚೌಧುರಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !