ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UI Teaser: ಕತ್ತಲ ಲೋಕಕ್ಕೆ ಕರೆದೊಯ್ದ ಉಪೇಂದ್ರ 

Published 19 ಸೆಪ್ಟೆಂಬರ್ 2023, 20:31 IST
Last Updated 19 ಸೆಪ್ಟೆಂಬರ್ 2023, 20:31 IST
ಅಕ್ಷರ ಗಾತ್ರ

ಸ್ಟಾರ್‌ ಸಿನಿಮಾಗಳಿಗೆ ಬೆಳಕಿನ ಅಭಾವ ಇತ್ತೀಚಿನ ಹೊಸ ಟ್ರೆಂಡ್‌. ರಿಯಲ್‌ಸ್ಟಾರ್‌ ಉಪೇಂದ್ರ ಕೂಡ ‘ಯುಐ’ ಚಿತ್ರದ ಟೀಸರ್‌ ಮೂಲಕ ಪ್ರೇಕ್ಷಕರನ್ನು ಕತ್ತಲ ಲೋಕಕ್ಕೆ ಕರೆದೊಯ್ದಿದ್ದಾರೆ. ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಚಿತ್ರದ ಟೀಸರ್‌ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದೆ. ಇಡೀ ಟೀಸರ್‌ನಲ್ಲಿ ಶಬ್ದ, ಕೆಲ ಡೈಲಾಗ್‌ಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ಕತ್ತಲ ಜಗತ್ತು. ಉದ್ದೇಶಪೂರ್ವಕವಾಗಿಯೇ ಟೀಸರ್‌ನಲ್ಲಿ ಚಿತ್ರತಂಡ ಯಾವ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ.

‘ಇದು ಎಐ ಅಲ್ಲ ಯುಐ ಜಗತ್ತು. ಈ ಟೀಸರ್‌ ನಿಮ್ಮ ಕ‌ಲ್ಪನೆಗಾಗಿ’ ಎನ್ನುವ ಉಪೇಂದ್ರ ಮತ್ತೆ ಟೀಸರ್‌ ಮೂಲಕ ಪ್ರೇಕ್ಷಕರ ತಲೆಗೆ ಹುಳ ಬಿಡುವ ಯತ್ನ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಫಸ್ಟ್‌ ಲುಕ್‌ ಬಿಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದಾದ ಬಳಿಕ ಉಪೇಂದ್ರ ಮತ್ತು ನಿರ್ಮಾಪ‍ಕರು ಸಂಭಾಷಣೆ ಮಾಡುವ ವಿಡಿಯೋವನ್ನು ಬಿಟ್ಟು ‘ನಾವು ಪ್ರಚಾರ ಮಾಡುವುದಿಲ್ಲ. ಜನರೇ ಒಳ್ಳೆ ಸಿನಿಮಾವನ್ನು ತಾವಾಗಿಯೇ ಪ್ರಚಾರ ಮಾಡುತ್ತಾರೆ’ ಎಂಬ ಸಂದೇಶ ನೀಡಿ ಯಾವ ವಿಷಯವನ್ನೂ ಬಿಟ್ಟುಕೊಡದೆ ಹಳೆಯ ಪೋಸ್ಟರ್‌ ಅನ್ನೇ ಮತ್ತೆ ತೋರಿಸಿದ್ದರು.

ಟೀಸರ್‌ ಬಿಡುಗಡೆ ಮಾಡಿದ ನಟ ಶಿವರಾಜ್​ಕುಮಾರ್,​ ಉಪೇಂದ್ರ ಅವರ ವಿಭಿನ್ನ ಸಾಹಸಕ್ಕೆ ಮೆಚ್ಚುಗೆ ವ್ಯಪಕ್ತಪಡಿಸಿದ್ದಾರೆ. ‘ಉಪೇಂದ್ರ ಯಾವಾಗಲೂ ಭಿನ್ನವಾಗಿದ್ದನ್ನು ಮಾಡುತ್ತಾರೆ. ‘ಓಂ’ ಸಿನಿಮಾದಲ್ಲಿಯೇ ಅವರ ಕ್ರಿಯಾಶೀಲತೆ ಪರಿಚಯವಾಗಿತ್ತು’ ಎಂದರು ಶಿವಣ್ಣ.

ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿರುವ ಚಿತ್ರವಿದು. ಕೆ.ಪಿ. ಶ್ರೀಕಾಂತ್​ ಮತ್ತು ಜಿ. ಮನೋಹರನ್​ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT