ಎಳೆಬಿಸಿಲಿನಂಥ ಚೆಲುವೆ ಬೆಂಗಳೂರಿಗೆ ಬಂದಿಹಳು

7

ಎಳೆಬಿಸಿಲಿನಂಥ ಚೆಲುವೆ ಬೆಂಗಳೂರಿಗೆ ಬಂದಿಹಳು

Published:
Updated:

’ಉರಿ‘ ಎನ್ನುವ ಸರ್ಜಿಕಲ್‌ ಸ್ಟ್ರೈಕ್‌ ವಸ್ತುವುಳ್ಳ ಚಿತ್ರದ ಪಲ್ಲವಿ ಶರ್ಮಾ ಪಾತ್ರ ಚಿತ್ರ ನೋಡಿದವರ ಮನದಲ್ಲಿ ಉಳಿಯುವಂಥದು. ’ವಿಕಿ ಡೋನರ್‌‘ ಚಿತ್ರದ ಮೂಲಕ ಬಾಲಿವುಡ್‌ ಹೊಸ್ತಿಲು ತುಳಿದ ಈಕೆಯ ಘಳಿಗೆ ಚೆನ್ನಾಗಿತ್ತು. ಆನಂತರದ್ದೆಲ್ಲ ಯಶಸ್ಸಿನ ಏಣಿಗಳು. ಈಗ ತಲುಪಿರುವುದು ಗ್ಲಾಮರ್‌ ದುನಿಯಾ ಎಂಬ ಎತ್ತರದ ಮಹಲು.

ತನ್ನದೇ ಆಯ್ಕೆಗಳ ದಾರಿಯಲ್ಲಿ ತಾನಂದುಕೊಂಡ ಹಾಗೆ ಬದುಕುತ್ತಿರುವ ಚೆಲುವೆ. ’ಉರಿ‘ ಚಿತ್ರದ ಮಹಾ ಯಶಸ್ಸಿನ ನಂತರವಂತೂ ಅಭಿಮಾನಿಗಳ ಹೃದಯಬಡಿತ ಹೆಚ್ಚುತ್ತಲೇ ಇದೆ. ನಾಳಿನ ಆಕೆಯ ದಿನಗಳು ಅವಳಷ್ಟೇ ಶುಭ್ರವಾಗಿವೆ. ಎಳೆಬಿಸಿಲಿನಂಥ ಚೆಲುವೆ ಈಗ ಬೆಂಗಳೂರಿನ ಚಳಿಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ!

ಬೆಚ್ಚಗಿನ ಭಾವಕ್ಕೆ, ಕಣ್ತುಂಬಿಕೊಳ್ಳುವ ಬಯಕೆಯ ಅಭಿಮಾನಿಗಳಿಗೆ ಒಂದು ಅವಕಾಶವಂತೂ ಇದೆ. ದೇಶದ ಅತ್ಯಂತ ಯಶಸ್ವಿ ಯುವಜನೋತ್ಸವ ಎಂದು ಗುರುತಿಸಿಕೊಂಡಿರುವ ’ಅಂಡರ್‌ 25‘ ಉತ್ಸವದಲ್ಲಿ ಪ್ರಧಾನ ಭಾಷಣ ನೀಡಲು ಈ ಸುಂದರಿ ಆಗಮಿಸುತ್ತಿದ್ದಾಳೆ. ಆಕೆಯ ಚೆಲುವು ಮತ್ತು ಮುದ್ದಾದ ಮಾತುಗಳು ಮತ್ತು ಈ ವಯಸ್ಸಿನ ಯುವತಿಯ ಜೀವಪರ ವಿಚಾರಗಳು, ಉತ್ಸಾಹಭರಿತ ಭಾವ ಲಹರಿ, ಕನಸುಗಳ ಗಾಳಿಪಟ ಹಾರಿಬಿಡಲಿದ್ದಾಳೆ.

ನಿಮ್ಮ ಭಾವಬಾನಿನಲ್ಲಿ ವಿಚಾರಗಳು ಹಾಯಾಗಿ ಆಡಿಕೊಂಡಿರಲಿ. ಮನಸಿನೊಳಕ್ಕೆ ಇಳಿಯಲಿ. ಯುವಕರ ಉತ್ಸಾಹಕ್ಕೆ ಜೀವ ಚೈತನ್ಯ ತುಂಬಲು ಇದೇ ಫೆಬ್ರುವರಿ 2 ಮತ್ತು 3ರಂದು ಜಯಮಹಲ್‌ ಪ್ಯಾಲೇಸ್‌ನಲ್ಲಿ ನಿಮ್ಮ ಮುಂದೆ ಯಾಮಿ ಗೌತಮ್‌. 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !