ಬುಧವಾರ, ಸೆಪ್ಟೆಂಬರ್ 22, 2021
25 °C

ನಿರ್ದಿಷ್ಟ ದಾಳಿ ಆಧರಿಸಿದ ಸಿನಿಮಾ 'ಉರಿ' ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ಗಡಿಭಾಗದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ಆಧರಿಸಿದ ಆದಿತ್ಯ ಧಾರ್ ನಿರ್ದೇಶನದ ಉರಿ ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ.

18 ಸೆಪ್ಟೆಂಬರ್ 2016 ರಂದು ಕಾಶ್ಮೀರದ ಉರಿ ಪಟ್ಟಣದ ಸೇನಾ ನೆಲೆ ಮೇಲೆ ಜೈಷ್ ಇ ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದು,ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು.  ಈ ಅಮಾನವೀಯ ದಾಳಿಗೆ ತಿರುಗೇಟು ನೀಡಿದ ಭಾರತದ ನಿರ್ದಿಷ್ಟ ದಾಳಿಯ ಬಗ್ಗೆ ಇರುವ ಈ ಚಿತ್ರದ ಟ್ರೇಲರ್ ಈಗ ಟ್ರೆಂಡಿಂಗ್ ಆಗಿದೆ.
ವಿಕಿ ಕೌಶಲ್, ಯಾಮಿ ಗೌತಮ್,  ಪರೇಶ್ ರಾವಲ್ ತಾರಾಗಣವಿರುವ ಈ ಚಿತ್ರ ಜನವರಿ 11 ರಂದು ತೆರೆಕಾಣಲಿದೆ. 

ಟ್ವಿಟರ್‌ನಲ್ಲಿ ಟ್ರೆಂಡಿಂಗ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು