ಪವನ್ ಕಲ್ಯಾಣ್ ನಟನೆಯ ತೆಲುಗಿನ ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ವಿಜಯ್ ಅಭಿನಯದ ‘ತೇರಿ’ ಚಿತ್ರದ ರೀಮೇಕ್ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ ಈ ಚಿತ್ರ ಯಾವುದೇ ಸಿನಿಮಾದ ರೀಮೇಕ್ ಅಲ್ಲ ಎಂದು ಚಿತ್ರದ ನಿರ್ದೇಶಕ ಹರಿಶಂಕರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ವಿಡಿಯೊ ಮಾಡಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಹರಿಶಂಕರ್, ‘ಸಾಕಷ್ಟು ಜನ ಈ ಸಿನಿಮಾ ರಾಜಕೀಯ ಪ್ರೇರಿತವಾಗಿದೆಯೇ ಎಂದು ಕೇಳಿದ್ದಾರೆ. ಆದರೆ ಪವನ್ ಕಲ್ಯಾಣ್ ಸಿನಿಮಾವನ್ನು ಸಿನಿಮಾವಾಗಿಯೇ ನೋಡುತ್ತಾರೆ. ಹೀಗಾಗಿ ಯಾವುದೇ ರಾಜಕೀಯ ಹಿತಾಸಕ್ತಿ ಈ ಸಿನಿಮಾದಲ್ಲಿ ಇಲ್ಲ. ಇದೊಂದು ಸ್ಥಳೀಯ ಪೊಲೀಸ್ ಹಾಗೂ ಹಳ್ಳಿಯಲ್ಲಿನ ರಾಜಕೀಯದ ಕಥೆ. ಯಾವುದೇ ಪಕ್ಷದ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಜತೆಗೆ ಯಾವುದೇ ಸಿನಿಮಾದ ರೀಮೇಕ್ ಕೂಡ ಅಲ್ಲ. ಈ ಹಿಂದೆ ಹೇಳಿದಂತೆ 2027ರ ಮಾರ್ಚ್ 26ರಂದು ಸಿನಿಮಾ ತೆರೆಗೆ ಬರಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.