ಬುಧವಾರ, ನವೆಂಬರ್ 13, 2019
18 °C

ವಾಲಿಮೈ ಚಿತ್ರದಲ್ಲಿ ನಜ್ರೀಯಾ, ಕೀರ್ತಿ

Published:
Updated:
Prajavani

ಅಜಿತ್‌ ನಟನೆಯ ಹೊಸ ಚಿತ್ರಕ್ಕೆ ಟೈಟಲ್‌ ಅಂತಿಮಗೊಂಡಿದ್ದು, ಈ ಚಿತ್ರಕ್ಕೆ ‘ವಾಲಿಮೈ’ ಎಂದು ಟೈಟಲ್‌ ಇಟ್ಟಿದ್ದಾರೆ. ಈಗ ಈ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ.

ಹೊಸ ಸುದ್ದಿಯೊಂದರ ಪ್ರಕಾರ, ಮಲಯಾಳದ ಜನಪ್ರಿಯ ನಟಿ ಬೆಂಗಳೂರು ಡೇಸ್‌ ಖ್ಯಾತಿಯ ನಸ್ರೀಯಾ ನಜೀಂ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಟಿ ಕೀರ್ತಿ ಸುರೇಶ್‌ ಸಹ ಈ ಚಿತ್ರದಲ್ಲಿ ಅಜಿತ್‌ ಜೊತೆ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಇಬ್ಬರು ನಟಿಯರು ಅಜಿತ್‌ ಅಭಿನಯದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ನಜ್ರೀಯಾ ರಾಜ ರಾಣಿ, ನೇರಂ ಸೇರಿದಂತೆ ಐದಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ತಮಿಳು ಆ್ಯಕ್ಷನ್‌ ಚಿತ್ರವನ್ನು ಬೋನಿಕಪೂರ್‌ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಅಜಿತ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸುತ್ತಿದ್ದು, ಕೀರ್ತಿ ಸುರೇಶ್‌ ಅವರ ಜೋಡಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.

ಈ ಚಿತ್ರದಲ್ಲಿ ನಟ, ನಿರ್ದೇಶಕ ಎಸ್‌.ಜೆ.ಸೂರ್ಯ ಅವರು ಖಳನಾಯಕನಾಗಿ ನಟಿಸಲಿದ್ದಾರೆ. ಈ ನಟ ಮರ್ಸೆಲ್‌ ಹಾಗೂ ಸ್ಪೈಡರ್‌ನಲ್ಲಿ ಖಳನಟನಾಗಿ ಅಭಿನಯಿಸಿದ್ದರು. ತಮಿಳಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು ತೆಲುಗು ಭಾಷೆಗೆ ಡಬ್‌ ಮಾಡಿ ಬಿಡುಗಡೆ ಂಆಡಲು ಚಿತ್ರತಂಡ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)