ನಟ ನಾಗಚೈತನ್ಯ ಮೊದಲ ಬಾರಿಗೆ ವೆಂಕಟೇಶ್ ಜೊತೆ ಕ್ಯಾಮೆರಾ ಎದುರಿಸುವ ಆತಂಕದಲ್ಲಿದ್ದರೆ, ಇಬ್ಬರು ಬೆಡಗಿಯರು ಮೆಗಾ ಸ್ಟಾರ್ಗಳೊಂದಿಗೆ ತೆರೆ ಹಂಚಿಕೊಳ್ಳುವ ಖುಷಿಯಲ್ಲಿದ್ದಾರೆ. ‘ವೆಂಕಿ ಮಾಮ’ ಚಿತ್ರದ ಕಾಲ್ಶೀಟ್ಗೆ ಸಹಿ ಹಾಕಿರುವ ಸುಂದರಿಯರಾದ ರಾಶಿ ಖನ್ನಾ ಮತ್ತು ಪಾಯಲ್ ರಜಪೂತ್ ತಮ್ಮ ಖುಷಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಹಿರಿಯ ನಟ ವೆಂಕಟೇಶ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಷ್ಟೆ ಅಲ್ಲ, ನಾಗಚೈತನ್ಯ ಎರಡನೆ ನಾಯಕರಾಗಿರುವುದೂ ಅವರ ಖುಷಿಗೆ ಕಾರಣ ಎಂದು ಇಬ್ಬರೂ ತಮ್ಮ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.

‘ವೆಂಕಿ ಮಾಮ’ ಕಳೆದ ವಾರವೇ ಸೆಟ್ಟೇರಿದೆ. ರಾಜಮುಂಡ್ರಿಯಲ್ಲಿ ನಡೆದ ಮುಹೂರ್ತದ ಫೋಟೊವನ್ನೂ ನಾಗಚೈತನ್ಯ ಟ್ವೀಟ್ ಮಾಡಿದ್ದರು. ಗೋದಾವರಿ ತೀರದಲ್ಲಿ ಕೆಲವು ಆರಂಭಿಕ ದೃಶ್ಯಗಳ ಚಿತ್ರೀಕರಣ ಮುಗಿದಿದೆ.

ಬಾಬ್ಬಿ ನಿರ್ದೇಶನದ ‘ವೆಂಕಿ ಮಾಮ’ ರೊಮ್ಯಾಂಟಿಕ್ ಕಾಮಿಡಿಯಾಗಿ ಮೂಡಿಬರಲಿದೆ. ತಮನ್ ಸಂಗೀತ ಸಂಯೋಜಿಸಲಿದೆ.

ತೆಲುಗು ಸಿನಿರಸಿಕರಿಗೆ ವೆಂಕಿ–ಚೈ ಜೋಡಿಯ ಕಾಂಬಿನೇಷನ್ನ್ನು ತೆರೆ ಮೇಲೆ ಕಾಣುವ ಅವಕಾಶ ಸ್ವಲ್ಪ ತಡವಾಗಿಯಾದರೂ ಸಿಕ್ಕಿದೆ. ‘ಮಜಿಲಿ’ ಚಿತ್ರೀಕರಣವನ್ನು ಮುಗಿಸಿದ ನಾಗಚೈತನ್ಯ ನೇರವಾಗಿ ‘ವೆಂಕಿ ಮಾಮ’ನ ಕ್ಯಾಂಪ್ಗೆ ಬಂದಿಳಿದಿದ್ದರು.

ಮದುವೆಯಾದ ಬಳಿಕಅವರು, ಹೆಂಡತಿ ಸಮಂತಾ ಅಕ್ಕಿನೇನಿ ಜೊತೆಗೆ ತೆರೆ ಹಂಚಿಕೊಂಡ ಮೊದಲ ಚಿತ್ರ ‘ಮಜಿಲಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.