ಗುರುವಾರ , ಫೆಬ್ರವರಿ 9, 2023
29 °C

ಹೃದಯಾಘಾತದಿಂದ ಹಿರಿಯ ನಟಿ ತಬಸ್ಸುಮ್ ನಿಧನ 

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹಿರಿಯ ನಟಿ ತಬಸ್ಸುಮ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. 

ಬಾಲ ಕಲಾವಿದೆಯಾಗಿ ಮತ್ತು ಬಾಲಿವುಡ್‌ ಟಾಕ್ ಶೋ ಮೂಲಕ ತಬಸ್ಸುಮ್ ಹೆಸರುವಾಸಿಯಾಗಿದ್ದರು.  

‘ನಮ್ಮ ತಾಯಿ ಅವರು ಕಳೆದ ಕೆಲವು ದಿನಗಳಿಂದ ಗ್ಯಾಸ್ಟ್ರೋ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ ರಾತ್ರಿ 8.40 ಮತ್ತು 8.42 ಸುಮಾರಿಗೆ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು’ ಎಂದು ತಬಸ್ಸುಮ್ ಅವರ ಪುತ್ರ ಹೋಶಾಂಗ್ ಗೋವಿಲ್ ತಿಳಿಸಿದ್ದಾರೆ.

ಬಾಲ ಕಲಾವಿದೆಯಾಗಿ ಚಿತ್ರರಂಗ ಪ್ರವೇಶಿಸಿದ ತಬಸ್ಸುಮ್ ಅವರನ್ನು ‘ಬೇಬಿ ತಬಸ್ಸುಮ್’ ಎಂದು ಕರೆಯಲಾಗುತ್ತಿತ್ತು. 1940ರ ದಶಕದಲ್ಲಿ ‘ನರ್ಗೀಸ್, ‘ಮೇರಾ ಸುಹಾಗ್’, ‘ಮಂಜಧರ್’, ‘ಬರಿ ಬೆಹೆನ್’ ಚಿತ್ರಗಳಲ್ಲಿ ನಟಿಸಿದ್ದಾರೆ.

ತಬಸ್ಸುಮ್ ಅವರು ದೂರದರ್ಶನದಲ್ಲಿ 1972ರಿಂದ 1993ರವರೆಗೆ ಪ್ರಸಿದ್ಧ ಟಾಕ್ ಶೋ ‘ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್’ ಅನ್ನು ಆಯೋಜಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು