ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ, ಮರಾಠಿ ಸಿನಿಮಾಗಳಲ್ಲಿ ಛಾಪು ಮೂಡಿಸಿದ್ದ ಹಿರಿಯ ನಟಿ ಸೀಮಾ ದೇವ್‌ ನಿಧನ

Published 24 ಆಗಸ್ಟ್ 2023, 7:00 IST
Last Updated 24 ಆಗಸ್ಟ್ 2023, 7:00 IST
ಅಕ್ಷರ ಗಾತ್ರ

ಮುಂಬೈ: ಹಿಂದಿ, ಮರಾಠಿ ಚಿತ್ರರಂಗದಲ್ಲಿ ನಟನೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಟಿ ಸೀಮಾ ದೇವ್‌ (81) ಇಂದು ನಿಧನರಾದರು. 

ವಯೋಸಹಜ ಕಾಯಿಲೆಗಳಿಂದ ಗುರುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದರು ಎಂದು ಅವರ ಪುತ್ರ ಅಭಿನಯ್ ದೇವ್‌ ‌ಮಾಹಿತಿ ನೀಡಿದ್ದಾರೆ.

ಸೀಮಾ ಅವರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಮೂರು ವರ್ಷಗಳ ಹಿಂದೆ ಅಲ್ಝೈಮರ್‌ ಕಾಯಿಲೆಗೆ ತುತ್ತಾಗಿದ್ದರು.

‘ತಾಯಿ ಸೀಮಾ ಅವರ ಸಾವಿಗೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯಿಂದಾಗಿ, ವ್ಯಕ್ತಿಯು ಹೇಗೆ ನಡೆಯಬೇಕೆಂದು ಮರೆತುಬಿಡುತ್ತಾನೆ. ಸ್ನಾಯುವಿನ ಸ್ಮರಣೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಅಂಗಗಳು ಒಂದೊಂದಾಗಿ ಸ್ಥಗಿತಗೊಳ್ಳಲು ಪ್ರಾರಂಭಿಸುತ್ತವೆ’ ಎಂದು ಅಭಿನಯ್ ದೇವ್‌ ಪಿಟಿಐಗೆ ತಿಳಿಸಿದ್ದಾರೆ.

ಸೀಮಾ ಅವರ ಪತಿ ರಮೇಶ್‌ ದೇವ್‌ ಕೂಡ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು 2022ರಲ್ಲಿ ಮೃತಪಟ್ಟಿದ್ದಾರೆ.

1957ರಲ್ಲಿ ಮರಾಠಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಮೊದಲು ‘ಆಲಿಯಾ ಭೊಗಾಸಿ‘ ಚಿತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಅವರ ಸಿನಿ ಪಯಣ ಆರಂಭವಾಗಿ ‘ ಆನಂದ್‌‘,ಗುರುದೇವ್‌ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದರು. 2021 ಬಿಡುಗಡೆಯಾದ ‘ಜೀವನ ಸಂಧ್ಯಾ’ ಮರಾಠಿ ಚಿತ್ರ ಸೀಮಾ ಅವರು ನಟಿಸಿದ್ದ ಕೊನೆಯ ಸಿನಿಮಾವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT