ಬುಧವಾರ, ಜುಲೈ 28, 2021
28 °C

ದಕ್ಷಿಣ ಭಾರತದ ಹಿರಿಯ ನಟಿ ಉಷಾರಾಣಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಬೆಂಗಳೂರು: ಮಲಯಾಳ ಹಾಗೂ ತಮಿಳು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಹಿರಿಯ ನಟಿ ಉಷಾರಾಣಿ ಇನ್ನಿಲ್ಲ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 62 ವರ್ಷದ ಹಿರಿಯ ನಟಿ ಭಾನುವಾರ ಚೆನ್ನೈನಲ್ಲಿ ಕೊನೆಯುಸಿರೆಳೆದರು. ಇವರ ಪತಿ ದಿವಂಗತ ಎನ್‌. ಶಂಕರನ್‌ ನಾಯರ್ ಕೂಡ ಹೆಸರಾಂತ  ನಿರ್ದೇಶಕರಾಗಿದ್ದರು. ಉಷಾರಾಣಿ ಅವರಿಗೆ ಮಗ ವಿಷ್ಣು ಶಂಕರ್‌ ಇದ್ದಾರೆ. 

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಉಷಾ ರಾಣಿ ಐದು ದಶಕಗಳ ಬಣ್ಣದ ಬದುಕಿನಲ್ಲಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ತಮಿಳಿನಲ್ಲಿ 50 ಮತ್ತು ಇನ್ನೂರಕ್ಕೂ ಹೆಚ್ಚು ಮಲಯಾಳ ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲೂ ಇವರು ಅಭಿನಯಿಸಿದ್ದಾರೆ. 

ಅಹಂ, ಏಕಲವ್ಯನ್‌, ಪಾತ್ರಂ ಅವರು ನಟಿಸಿರುವ ಪ್ರಮುಖ ಚಿತ್ರಗಳು. 2004ರಲ್ಲಿ ಬಿಡುಗಡೆಯಾದ ‘ಮಯಿಲಾಟ್ಟಂ’ ಅವರ ಕೊನೆಯ ಚಿತ್ರ. ಇದು ಗಿದೆ. ಇವರು ಕಮಲಹಾಸನ್‌, ಶಿವಾಜಿ ಗಣೇಶನ್‌‌, ಎಂಜಿಆರ್‌, ಜಯಲಲಿತಾ ಜೊತೆ ನಟಿಸಿದ್ದರು. 

ಬಹುಭಾಷಾ ಸಿನಿಮಾಗಳಲ್ಲಿ ನಟಿಸಿದ್ದ ಅವರು, ಮಲಯಾಳ ಸಿನಿಮಾಗಳ ಮೂಲಕ ಹೆಚ್ಚು ಪರಿಚಿತರು. ಫೃಥ್ವಿರಾಜ್‌ ಸುಕುಮಾರನ್‌, ಟೊವಿನೊ ಥಾಮಸ್‌, ಜಯಸೂರ್ಯ ಸೇರಿದಂತೆ ಮಾಲಿವುಡ್‌ನ ಅನೇಕ ನಟ– ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ನಟ ಜಯಸೂರ್ಯ ತನ್ನ ಪತ್ನಿ ಹಾಗೂ ಉಷಾ ರಾಣಿಯವರ ಜೊತೆಗೆ ತೆಗೆಸಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದು, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಇಲ್ಲಿ ಓದಿ..ಇಲ್ಲಿ ಓದಿ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು