ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಓ ನನ್ನ ಪ್ರೀತಿಯ ಸಿನಿಮಾ': 15 ವರ್ಷವಾಯ್ತು 'ಪರಿಣೀತ'ಳಾಗಿ- ವಿದ್ಯಾ ಬಾಲನ್ ಹರ್ಷ

ಖುಷಿಖುಷಿ ನೆನಪು
ಅಕ್ಷರ ಗಾತ್ರ

ನವದೆಹಲಿ: ಪರಿಣೀತಾ ಚಿತ್ರ ಬಿಡುಗಡೆಯಾಗಿ ಬುಧವಾರಕ್ಕೆ 15 ವರ್ಷಗಳಾದವು. ಪ್ರದೀಪ್ ಸರ್ಕಾರ್ ನಿರ್ದೇಶನದ ಈ ಚಿತ್ರವು ಜೂನ್ 10, 2005ರಂದು ಬಿಡುಗಡೆಯಾಗಿತ್ತು. ವಿದ್ಯಾ ಬಾಲನ್, ಸಂಜಯ್ ದತ್, ದಿಯಾ ಮಿರ್ಝಾ ಮತ್ತು ಸೈಫ್ ಅಲಿಖಾನ್ ಮುಖ್ಯ ಭೂಮಿಕೆಯಲ್ಲಿದ್ದರು.

ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಈ ಚಿತ್ರದ ಹಾಡುಗಳು ದೇಶವ್ಯಾಪಿ ಹವಾ ಎಬ್ಬಿಸಿತ್ತು. ಇಂದಿಗೂ ಎಫ್‌ಎಂನಲ್ಲಿ ಆಗೊಮ್ಮೆ ಈಗೊಮ್ಮೆ 'ಪರಿಣೀತಾ'ದ ಹಾಡುಗಳು ತೇಲಿ ಬರುವುದುಂಟು. ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದವರು ಶಂತನು ಮೊಯಿತ್ರಾ.

ಇದು ವಿದ್ಯಾ ಬಾಲನ್ ಮತ್ತು ಮುಂದೆ ಅವರ ಪತಿಯಾದ ಸಿದ್ದಾರ್ಥ ರಾಯ್ ಕಪೂರ್ (ನಿರ್ಮಾಪಕ) ಅವರಿಗೆ ಮೊದಲ ಚಿತ್ರವೂ ಹೌದು. ವಿಮರ್ಶಕರ ಮೆಚ್ಚುಗೆಯ ಜೊತೆಗೆ ನಾಲ್ಕು ಫಿಲಂಫೇರ್‌ ಪ್ರಶಸ್ತಿಗಳನ್ನೂ ಈ ಚಿತ್ರ ತನ್ನದಾಗಿಸಿಕೊಂಡಿತ್ತು.

'ಪರಿಣೀತಾ'ದ ಅಕ್ಷರಶಃ ಅರ್ಥವನ್ನೇ ಅನ್ವಯಿಸಿರುವ ವಿದ್ಯಾ ಜಾಣತನದಿಂದ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಒಕ್ಕಣೆ ಬರೆದುಕೊಂಡಿದ್ದಾರೆ.

'ಜಗತ್ತಿಗೆ ಗೊತ್ತಾಗುವ ಮೊದಲೇ ಲಲಿತಾ (ವಿದ್ಯಾ ಪಾತ್ರ) ಶೇಖರ್‌ನ (ಸೈಫ್ ಪಾತ್ರ) ಮನದರಸಿಯಾಗಿದ್ದಳು. ನೀನು ನನ್ನನ್ನೂ ಆವರಿಸಿಕೊಂಡಿದ್ದಿ. ಆದರೆ ಜೂನ್ 10, 2005ರಂದು ನಾನು ನಿನ್ನ 'ಪರಿಣಿತ'ಳಾದೆ (ಮದುವೆ). ಓ ನನ್ನ ಪ್ರೀತಿಯ ಸಿನಿಮಾ, ನಾನು ನಿನ್ನನ್ನು ಅಂದು ಪ್ರೀತಿಸುತ್ತಿದ್ದೆ, ಇಂದೂ ಪ್ರೀತಿಸುತ್ತೇನೆ, ಎಂದೆಂದೂ ಹೆಚ್ಚೆಚ್ಚು ಪ್ರೀತಿಸುತ್ತಲೇ ಇರುತ್ತೇನೆ. ಈ ಮದುವೆ ಯಶಸ್ವಿಯಾಗಲು, ಬೆಳಗಲು ಸಹಕರಿಸಿದ ಎಲ್ಲರಿಗೂ ಮನಃಪೂರ್ವಕ ನಮನಗಳು' ಎಂದು ವಿದ್ಯಾ ಬಾಲನ್ ತಮ್ಮ ಪೋಸ್ಟ್ ಮುಗಿಸಿದ್ದಾರೆ.

ಸಿನಿಮಾ ಸಂಭ್ರಮವನ್ನು ತಾರೆಗಳು ಹಂಚಿಕೊಂಡಿರುವ ಬಗೆ ಹೀಗಿದೆ. ಕಣ್ತುಂಬಿಕೊಳ್ಳಿ...

Thank you @pradeepsarkar and @vidhuvinodchoprafilms for making me Gayatri Tantia ❤️ Has it really been 15 years? #15YearsOfParineeta Image by Joy Datta.

Dia Mirza (@diamirzaofficial) ರಿಂದ ಹಂಚಲಾದ ಪೋಸ್ಟ್ ಅವರು ರಂದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT