ಬುಧವಾರ, ಸೆಪ್ಟೆಂಬರ್ 18, 2019
28 °C

‘ಬಿಗಿಲ್‌’ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ವಿಜಯ್‌ನಿಂದ ರಿಂಗ್‌ ಉಡುಗೊರೆ

Published:
Updated:
Prajavani

ನಟ ವಿಜಯ್‌ ‘ಬಿಗಿಲ್‌’ ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು, ಕಲಾವಿದರು ಸೇರಿ 400 ಜನರಿಗೆ ಚಿನ್ನದ ಉಂಗುರವನ್ನು ಉಡುಗೊರೆ ನೀಡಿದ್ದಾರಂತೆ.

ಕ್ರೀಡೆಗೆ ಸಂಬಂಧಿಸಿದ ಕಥಾವಸ್ತು ಹೊಂದಿದ ಈ ಚಿತ್ರದ ಚಿತ್ರೀಕರಣವು ಇತ್ತೀಚೆಗೆ ಅಂತಿಮಗೊಂಡಿತು. ಈ ಖುಷಿಯನ್ನು ಸಂಭ್ರಮಿಸಲು ನಟ ವಿಜಯ್‌ ಈ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ, ಕಲಾವಿದರಿಗೆ ‘ಬಿಗಿಲ್‌’ ಎಂದು ಇಂಗ್ಲಿಷ್‌ ಅಕ್ಷರದಲ್ಲಿ ಬರೆದಿರುವ ಉಂಗುರಗಳನ್ನು ಉಡುಗೊರೆಯಾಗಿ ನೀಡಿದರು ಎಂದು ವರದಿಗಳು ತಿಳಿಸಿವೆ.

ಸಿನಿಮಾ ತಂಡದ ಕೆಲ ಸದಸ್ಯರು ಈ ವಿಷಯ ಹಾಗೂ ಉಂಗುರದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರೂ ಇದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ‘ಎಂದಿಗೂ ಅತ್ಯುತ್ತಮ ಉಡುಗೊರೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಈಗ ಡಬ್ಬಿಂಗ್‌ ಹಂತದಲ್ಲಿದೆ. ಈ ಚಿತ್ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ವಿಜಯ್‌ ಹಾಗೂ ಅರ್ಚನಾ ಒಟ್ಟಿಗೆ ಮಾಡಿರುವ ಮೂರನೇ ಚಿತ್ರ ‘ಬಿಗಿಲ್‌’. ಈ ಹಿಂದೆ ‘ಥೇರಿ’ ಹಾಗೂ ‘ಮರ್ಸಲ್‌’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಎರಡೂ ಚಿತ್ರಗಳು ಸೂಪರ್‌ ಹಿಟ್‌ ಆಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ನಯನತಾರಾ ನಟಿಸುತ್ತಿದ್ದಾರೆ.

Post Comments (+)