ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾದಲ್ಲಿ ಶೂಟಿಂಗ್ ವೇಳೆ ಅಪಘಾತ: ತಮಿಳು ನಟ ವಿಜಯ್ ಆ್ಯಂಟನಿ ಗಂಭೀರ

Last Updated 19 ಜನವರಿ 2023, 11:46 IST
ಅಕ್ಷರ ಗಾತ್ರ

ಚೆನ್ನೈ: ಮಲೇಷ್ಯಾದಲ್ಲಿ ‘ಪಿಚ್ಚೈಕಾರನ್–2’ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ತಮಿಳು ನಟ ವಿಜಯ್ ಆ್ಯಂಟನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿಜಯ್ ಆ್ಯಂಟನಿ ಅವರನ್ನು ಕ್ವಾಲಾಲಂಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮಲೇಷ್ಯಾದ ದ್ವೀಪ ಸಮೂಹವೊಂದರ ಹಿನ್ನಿರಿನಲ್ಲಿ ಬೋಟ್‌ಗಳ ಮೂಲಕ ಸಾಹಸ ದೃಶ್ಯದ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಚಿತ್ರದ ನಟ ನಿರ್ಮಾಪಕರೂ ಆಗಿರುವ ವಿಜಯ್ ಆ್ಯಂಟನಿ ಇನ್ನೊಂದು ಬೋಟ್‌ಗೆ ಡಿಕ್ಕಿ ಹೊಡೆದು ಬೋಟಿನಲ್ಲಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಇತ್ತೀಚಿನ ವೈದ್ಯಕೀಯ ವರದಿ ಪ್ರಕಾರ ವಿಜಯ್ ಆ್ಯಂಟನಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರೂ ಚಿಕಿತ್ಸೆಗೆ ಸಹಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

2006ರಿಂದ ತಮಿಳು ಚಿತ್ರಂಗದಲ್ಲಿ ಗುರುತಿಸಿಕೊಂಡಿರುವ 47 ವರ್ಷ ವಯಸ್ಸಿನ ವಿಜಯ್ ಆ್ಯಂಟನಿ ಅವರು ಇದುವರೆಗೆ 20ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದು, ಉತ್ತಮ ಎಡಿಟರ್ ಎಂದು ಹೆಸರು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT