ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿವುಡ್‌ಗೆ ವಿಜಯ್‌ ಆಂಟೋನಿ

Last Updated 25 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಕಾಲಿವುಡ್‌ ನಟ, ಸಂಗೀತಗಾರ ವಿಜಯ್‌ ಆ್ಯಂಟೊನಿ ಮಾಲಿವುಡ್‌ನ ಮೆಗಾಸ್ಟಾರ್‌ ಮಮ್ಮುಟ್ಟಿ ಜೊತೆ ಹೊಸ ಚಿತ್ರವೊಂದರಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ವಿಜಯ್‌ ಆ್ಯಂಟೊನಿ ಮಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಈ ಚಿತ್ರವನ್ನು ವಿಪಿನ್‌ ನಿರ್ದೇಶನ ಮಾಡುತ್ತಿದ್ದಾರೆ. ಈಗ ವಿಜಯ್‌ ಆ್ಯಂಟೊನಿ ಅವರು ನಿರ್ವಹಿಸಬೇಕಾದ ಪಾತ್ರಕ್ಕೆ ಮೊದಲು ನಟ ವಿಜಯ್‌ ಸೇತುಪತಿ ಅವರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಅವರು ಮೂರು– ನಾಲ್ಕು ಚಿತ್ರಗಳ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಅವರು ಈ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಆ ಪಾತ್ರಕ್ಕೆ ಚಿತ್ರತಂಡ ವಿಜಯ್‌ಆ್ಯಂಟೊನಿ ಅವರ ಬಳಿ ಮಾತುಕತೆ ನಡೆಸಿತು.

ವಿಪಿನ್‌, ವಿಜಯ್‌ ಅವರನ್ನು ಭೇಟಿ ಮಾಡಿ, ಚಿತ್ರಕತೆಯನ್ನು ವಿವರಿಸಿದಾಗ ವಿಜಯ್‌ ನಟಿಸಲು ಒಪ್ಪಿಕೊಂಡರು. ಆದರೆ ಅಧಿಕೃತವಾಗಿ ಅವರು ಒಪ್ಪಿಗೆ ನೀಡಬೇಕಷ್ಟೇ. ಅಕ್ಟೋಬರ್‌ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ಸಿನಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT