‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ದೇವರಕೊಂಡ ಅವರ ಅದೃಷ್ಟವನ್ನೇ ಬದಲಿಸಿತು. ಟಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ನೆಲೆ ಕಂಡುಕೊಂಡಿರುವ ಅವರು ಸಾಕಷ್ಟು ಪ್ರಯೋಗಗಳಿಗೂ ಮೈಒಡ್ಡಿದ್ದಾರೆ.
‘ನೋಟಾ’ ‘ಗೀತಾ ಗೋವಿಂದಂ’ ಸಿನಿಮಾಗಳು ಯಶಸ್ವಿಯಾದರೂ ‘ಅರ್ಜುನ್ ರೆಡ್ಡಿ’ ಪಾತ್ರ ಮಾತ್ರ ಅಭಿಮಾನಿಗಳ ಮನಸ್ಸಿನಿಂದ ಮರೆಯಾಗಿಲ್ಲ. ಇಂಥದ್ದೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಬೇಕು ಎಂಬ ಹಂಬಲ ಈಗ ಮತ್ತೆ ನಿಜವಾಗುತ್ತಿದೆ. ‘ಡಿಯರ್ ಕಾಮ್ರೇಡ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಕೆಲವೇ ದಿನಗಳು ಆಗಿದ್ದರೂ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಇದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು ಇದು ‘ಅರ್ಜುನ್ ರೆಡ್ಡಿ 2’ ಎಂದು ಹೊಗಳಿದ್ದಾರೆ.
ಚಾಕ್ಲೆಟ್ ಹೀರೊ ಪಾತ್ರದಿಂದ ಹೊರಬಂದಿರುವ ವಿಜಯ್ ಈಗ ಮತ್ತೆ ಪವರ್‌ಫುಲ್ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಕೋಪ’ ನಾಯಕನ ಮೂಲಗುಣ. ಇದರಿಂದ ಹೊರಬರಲಾಗದೇ ಪ್ರೀತಿಗಾಗಿ ಹಂಬಲಿಸುವ ಪಾತ್ರದಲ್ಲಿ ಅವರು ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಜೋಡಿ ಈಗಾಗಲೇ ‘ಗೀತ ಗೋವಿಂದಂ’ನಲ್ಲಿ ಮೋಡಿ ಮಾಡಿದೆ. ರಾಜ್ಯಮಟ್ಟದ ಕ್ರಿಕೆಟ್ ಆಟಗಾರ್ತಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನೋಡಿರುವ ಅಭಿಮಾನಿಗಳು ಇವರಿಬ್ಬರ ಕೆಮಿಸ್ಟ್ರಿ ಸಕ್ಕತ್ತಾಗಿ ವರ್ಕ್ ಆಗಲಿದೆ ಎಂದು ಖುಷಿ ಪಟ್ಟಿದ್ದಾರೆ.
ವಿಜಯ್ ಈ ಸಿನಿಮಾದಲ್ಲಿ ವಿದ್ಯಾರ್ಥಿ ಮುಖಂಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜಿನಲ್ಲಿಯಾಗಲೀ, ರಸ್ತೆಯಲ್ಲಾಗಲೀ, ಎಲ್ಲೇ ಎನೇ ಗಲಾಟೆ ನಡೆದರೂ ಅಲ್ಲಿರಬೇಕು. ಹೊಡೆದಾಟ, ಗಲಾಟೆಯಲ್ಲಿ ಯಾವಾಗಲೂ ಸಿಕ್ಕಿಹಾಕಿಕೊಳ್ಳುವ ನಾಯಕನ ಗುಣದ ಎದುರು ನಾಯಕಿ ಹಾಗೂ ಅವರ ಪೋಷಕರ ವೇದನೆಯನ್ನು ತೋರಿಸಲಾಗಿದೆ.
ಜುಲೈ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಾಗೆಯೇ ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಕಾಣುವ ಸಾಧ್ಯತೆ ಕೂಡ ಇದೆಯಂತೆ. ಭರತ್ ಕುಮಾರ್ ಅವರ ರಚನೆ ಹಾಗೂ ನಿರ್ದೇಶನ ಈ ಸಿನಿಮಾಕ್ಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.