ಶನಿವಾರ, ಡಿಸೆಂಬರ್ 4, 2021
24 °C

ಕೃತಿ ಸನೊನ್‌ರೊಂದಿಗೆ ಹೆಜ್ಜೆ ಹಾಕಿ ಕಾಲೇಜು ದಿನಗಳನ್ನು ನೆನಪಿಸಿಕೊಂಡ ಅಮಿತಾಬ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಹಾಗೂ ಮಿಮಿ ಖ್ಯಾತಿಯ ನಟಿ ಕೃತಿ ಸನೊನ್ ಅವರ ರೊಮ್ಯಾಂಟಿಕ್‌ ನೃತ್ಯದ ವಿಡಿಯೊ ಈಗ ನೆಟ್ಟಿಗರ ಗಮನ ಸೆಳೆದಿದೆ.

ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃತಿ ಸನೊನ್‌ ಅವರು ಅಮಿತಾಬ್‌ ಬಚ್ಚನ್‌ರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೊ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಮಿತಾಬ್‌ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ.

'ಕೆಂಪು ಉಡುಪಿನಲ್ಲಿರುವ ಸುಂದರ ಯುವತಿ ಕೃತಿ ಸನೊನ್‌ ಅವರೊಂದಿಗೆ ನೃತ್ಯ ಮಾಡುತ್ತಿದ್ದೇನೆ. ನನಗೆ ಕಾಲೇಜು ಮತ್ತು ಕೋಲ್ಕತ್ತ ದಿನಗಳು ನೆನಪಾಗುತ್ತಿವೆ' ಎಂದು ಅಮಿತಾಬ್‌ ತಿಳಿಸಿದ್ದಾರೆ.

ಕೃತಿ ಸನೊನ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು