ಶನಿವಾರ, ಮೇ 8, 2021
24 °C

ಮಾಜಿ ಗೂಢಚಾರಿಣಿ ಪಾತ್ರದಲ್ಲಿ ವರ್ಜಿನಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ ಬಿ. ಶೆಟ್ಟಿ ಮತ್ತು ವರ್ಜಿನಿಯಾ ರಾಡ್ರಿಗಸ್ ಅಭಿನಯದ ಸಿನಿಮಾ ‘ಮಹಿರ’ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈ ಚಿತ್ರ ಜುಲೈ 26ರಿಂದ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಈ ಸುದ್ದಿ ತಿಳಿಸಲು ಪತ್ರಿಕಾಗೋಷ್ಠಿ ಕರೆದಿದ್ದ ನಿರ್ದೇಶಕ ಮಹೇಶ್ ಗೌಡ, ಇನ್ನೊಂದು ಗುಟ್ಟನ್ನು ಬಿಟ್ಟುಕೊಟ್ಟರು.

ಅದು ವರ್ಜಿನಿಯಾ ರಾಡ್ರಿಗಸ್ ಅವರಿಗೆ ಸಂಬಂಧಿಸಿದ ಗುಟ್ಟು. ವರ್ಜಿನಿಯಾ ಅವರು ನಟಿಸುತ್ತಿರುವ ಮೊದಲ ಕನ್ನಡ ಸಿನಿಮಾ ‘ಮಹಿರ’. ಚಿತ್ರಕ್ಕೆ ಸಂಬಂಧಿಸಿದ ದೃಶ್ಯಗಳಲ್ಲಿ ಅವರು ಫೈಟ್‌ ಮಾಡುತ್ತಿರುವುದು ಕಾಣಿಸುತ್ತದೆ. ಹೀಗಿದ್ದರೂ, ವರ್ಜಿನಿಯಾ ಅವರು ನಿಭಾಯಿಸಿರುವ ಪಾತ್ರ ಯಾವುದು ಎಂಬುದನ್ನು ಚಿತ್ರತಂಡ ಗುಟ್ಟಾಗಿಯೇ ಇರಿಸಿತ್ತು.

‘ವರ್ಜಿನಿಯಾ ಅವರು ಇದರಲ್ಲಿ ಮಾಜಿ ಗೂಢಚಾರಿಣಿಯ ಪಾತ್ರ ನಿಭಾಯಿಸಿದ್ದಾರೆ. ಆ ಪಾತ್ರಕ್ಕೆ ಅಗತ್ಯವಿರುವ ಆ್ಯಕ್ಷನ್‌ ದೃಶ್ಯಗಳನ್ನೂ ನಿಭಾಯಿಸಿದ್ದಾರೆ. ಇದು ಅಮ್ಮ ಮತ್ತು ಮಗಳ ಕಥೆ’ ಎಂದರು ಮಹೇಶ್.

ಚಿತ್ರದ ಇನ್ನೊಂದು ಆಕರ್ಷಣೆ ರಾಜ್ ಬಿ. ಶೆಟ್ಟಿ. ಮೊಟ್ಟೆ ಕಥೆಯನ್ನು ಹೇಳಿ ವೀಕ್ಷಕರನ್ನು ನಕ್ಕು ನಗಿಸಿದ್ದ ರಾಜ್, ಈ ಸಿನಿಮಾದಲ್ಲಿ ಗಂಭೀರವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ‘ತಲೆಯ ಮೇಲೆ ಕೂದಲು ಇಲ್ಲವೆಂದ ಮಾತ್ರಕ್ಕೆ, ತಲೆಯಲ್ಲಿ ಬುದ್ಧಿ ಇಲ್ಲ ಎಂದು ಭಾವಿಸಬಾರದು’ ಎನ್ನುವ ಮಾತಿನ ಮೂಲಕ, ತಮ್ಮ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

‘ರಾಜ್ ಅವರದ್ದು ಚಿತ್ರಕ್ಕೆ ತಿರುವು ನೀಡುವ ಪಾತ್ರ. ಅದು ಅತಿ ಮುಖ್ಯವಾದ ಒಂದು ಪಾತ್ರ. ಅವರು ಚಿತ್ರದ ಆರಂಭದಿಂದ ಕೊನೆಯವರೆಗೂ ಇರುತ್ತಾರೆ’ ಎಂದರು ಮಹೇಶ್. ‘ಚಿತ್ರದ ಬಿಡುಗಡೆಗೆ ಇನ್ನು ಒಂದು ತಿಂಗಳೂ ಉಳಿದಿಲ್ಲ. ನಾವು ಹೊಸಬರಾಗಿದ್ದರೂ ಮನರಂಜನೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ’ ಎಂಬ ಮಾತು ಸೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು