ಗುರುವಾರ , ಸೆಪ್ಟೆಂಬರ್ 23, 2021
27 °C
ವೈರಸ್ ಸಿನಿಮಾದಲ್ಲಿ ನಟಿ ರೇವತಿ ಮುಖ್ಯಪಾತ್ರದಲ್ಲಿ ನಟನೆ

‘ವೈರಸ್’ ಪೋಸ್ಟರ್ ಔಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷದ ಕೇರಳ ಜನರನ್ನು ಕಾಡಿದ್ದ ‘ನಿಫಾ ವೈರಸ್‌’ ಇದೀಗ ಚಿತ್ರಕತೆಯ ರೂಪ ಪಡೆದಿದೆ. ‘ವೈರಸ್’ ಈ ವರ್ಷದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದು, ಆಶಿಕ್ ಅಬು ಅವರು ಇದರ ಸಾರಥ್ಯ ವಹಿಸಿಕೊಂಡಿದ್ದಾರೆ. ಬಹುತಾರಾಗಣದ ಸಿನಿಮಾ ಇದೇ ಜೂನ್‌ನಲ್ಲಿ ತೆರೆಗೆ ಅಪ್ಪಳಿಸಲು ಸಜ್ಜುಗೊಂಡಿದೆ.  

ಚಿತ್ರ ತಯಾರಕರು ಇತ್ತೀಚೆಗೆ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ರೇವತಿ ಪಾತ್ರ ಇರುವ ಪೋಸ್ಟರ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕೇರಳದಲ್ಲಿ ವೈರಸ್ ದಾಳಿಯಿಟ್ಟಾಗ ಅದನ್ನು ಸಮರ್ಥವಾಗಿ ಎದುರಿಸಿದ ಹೆಗ್ಗಳಿಗೆ ಕೇರಳದ ಆರೋಗ್ಯ ಸಚಿವೆ
ಕೆ.ಕೆ. ಶೈಲಜಾ ಅವರದ್ದು. ಅವರ ಪಾತ್ರವೇ ಇಲ್ಲಿ ರೇವತಿ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಕುಂಚಕ್ಕೊ ಬೊಬನ್, ಪಾರ್ವತಿ, ಇಂದ್ರಜಿತ್, ರೀಮಾ ಕಲ್ಲಿಂಗಲ್, ರಹಮಾನ್, ಸೌಬಿನ್ ಶಹಿರ್ ಮತ್ತು ಟೊವಿನೊ ಥಾಮಸ್ ಅವರು ಚಿತ್ರದಲ್ಲಿರುವ ಪ್ರಮುಖ ಪಾತ್ರಗಳು. ನೈಜ ಕತೆಗೆ ಈ ಪಾತ್ರಗಳು ಪೋಷಾಕು ತೊಡಿಸಿವೆ. ವೈರಸ್‌ ಆಪೋಷನ ತೆಗೆದುಕೊಂಡವರ ಮನ ಮಿಡಿಯುವ ಕಥನ ಇಲ್ಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.