7

 ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಅನ್ಯಾಯ ನಡೆಯುತ್ತಿದೆ: ಆರೋಪ

Published:
Updated:

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆಗೆ ಮತದಾನ ಆರಂಭವಾಗಿದೆ. ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ಚುನಾವಣೆಯ ಕಾವು ಏರಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಯಾವ ಸ್ಥಾನ ಯಾರಿಗೆ ಎಂಬ ಪ್ರಶ್ನೆಗೆ ಇಂದು ಸಂಜೆ ಉತ್ತರ ದೊರೆಯಲಿದೆ.
ಮತದಾನ ಆರಂಭವಾದಾಗ ಕಣದಲ್ಲಿರುವ ದಿನೇಶ್ ಗಾಂಧಿ ಮತ್ತು ಜಿ ವೆಂಕಟೇಶ್ ಚುನಾವಣೆಯಲ್ಲಿ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿದರು.
ಹಾಲಿ ಇರುವ ಅಧ್ಯಕ್ಷರು ಒಂದು ಬಣ ಮಾಡಿಕೊಂಡಿದ್ದಾರೆ. ಆದ್ದರಿಂದ ಹೊಸ ಅಭ್ಯರ್ಥಿಗಳ ಕುರಿತು ಮತದಾರರಿಗೆ ಸರಿಯಾದ ಮಾಹಿತಿ ಇಲ್ಲ. ಆವರಣದ ಹೊರಭಾಗದಲ್ಲಿ ಪ್ರಚಾರ ಮಾಡಬೇಕು. ಆದರೆ ಕೆಲವರು ಯಾರಿಗೆ ಮತ ನೀಡಬೇಕು ಎಂಬುದನ್ನು ಒಂದು ಪಟ್ಟಿ ತಯಾರಿಸಿ ಮತದಾರರ ಜೇಬಿನಲ್ಲಿ ಹಾಕಿ ಕಳಿಸುತ್ತಿದ್ದಾರೆ. ಮತಪೆಟ್ಟಿಗೆಯವರೆಗೂ ಪ್ರಚಾರ ಮಾಡುತ್ತಿದ್ದಾರೆ. ಇದು ಅನ್ಯಾಯ ಎಂದು ಆರೋಪಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಸಹಜವಾಗಿ ಮತದಾನ ಮುಂದುವರಿದಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !