ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಗರ್‌– ಶ್ರಾ‍ಫ್‌ ‘ವಾರ್‌’ ನೋಟ

Last Updated 17 ಜುಲೈ 2019, 19:45 IST
ಅಕ್ಷರ ಗಾತ್ರ

ಬಹುನಿರೀಕ್ಷಿತ ‘ವಾರ್‌' ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್‌ ರಗಡ್‌ ಲುಕ್‌ನಲ್ಲಿಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಸೆಟ್ಟೇರಿದ ದಿನದಿಂದಲೂ ಈ ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿತ್ತು. ಈಗ 53 ನಿಮಿಷದ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಚಿತ್ರದಲ್ಲಿ ಹೃತಿಕ್‌ ಹಾಗೂ ಟೈಗರ್‌ ಶ್ರಾಫ್‌ ಜೋಡಿಯ ಆ್ಯಕ್ಷನ್‌ ದೃಶ್ಯಗಳು ಮೈ ನವೀರೆಳಿಸುವಂತಿವೆ.

ಈ ಟೀಸರ್‌ನಲ್ಲಿ ಇಬ್ಬರನ್ನು ಸಾಹಸ ದೃಶ್ಯಗಳ ಮೂಲಕಪರಿಚಯಿಸಲಾಗಿದೆ. ಮಾಡುತ್ತಾ, ಹೃತಿಕ್‌ನ ಕಟ್ಟುಮಸ್ತಾದ ದೇಹ, ಹೊಡೆದಾಟ, ಶ್ರಾಫ್‌ ಅವರು ಒಂದು ಕೈಯಲ್ಲಿ ಬೈಕ್‌ ಓಡಿಸುವ, ಪೈಟ್‌ ಚೇಸಿಂಗ್‌ ಮಾಡುವದೃಶ್ಯಗಳು ರೋಮಾಂಚನಗೊಳಿಸುತ್ತವೆ. ಹೃತಿಕ್‌ ಹಾಗೂ ಶ್ರಾಫ್‌ ಮಧ್ಯೆ ನಡೆಯುವ ಹೊಡೆದಾಟಗಳೇ ಟೀಸರ್‌ನಲ್ಲಿವೆ.

ಸಾಹಸ ಆ್ಯಕ್ಷನ್‌ ದೃಶ್ಯಗಳನ್ನೊಳಗೊಂಡ ಈ ಚಿತ್ರವು ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕೂರಿಸಿ ಚಿತ್ರ ನೋಡುವಂತೆ ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅಭಿಮಾನಿಗಳು ಈ ಟೀಸರ್‌ ಬಗ್ಗೆ ಕಮೆಂಟ್‌ ಮಾಡಿದ್ದಾರೆ.ಇಬ್ಬರು ನಟರ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ.

ಈ ಚಿತ್ರದ ನಾಯಕಿಯಾಗಿ ವಾಣಿ ಕಪೂರ್‌ ನಟಿಸಿದ್ದಾರೆ. ಈ ಚಿತ್ರವನ್ನು ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸುತ್ತಿದ್ದು, ಅಕ್ಟೋಬರ್‌ 2ರಂದು ಚಿತ್ರ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT