ಸೋಮವಾರ, ಸೆಪ್ಟೆಂಬರ್ 20, 2021
22 °C

ಅಂಕಿತಾ ‘ಜಸ್ಟಿಸ್‌’ಗೆ ರಮ್ಯಾ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಬಾಲಿವುಡ್‌ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಬಂಧಿಸಿರುವುದಕ್ಕೆ ಸಂಬಂಧಿಸಿ ‘ಜಸ್ಟಿಸ್’ ಎಂದು ಟ್ವೀಟ್‌ ಮಾಡಿರುವುದಕ್ಕೆ, ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಅಂಕಿತಾ ಟ್ವೀಟರ್‌ ಹೇಳಿಕೆಗೆ ರಮ್ಯಾ ಅವರು ‘ನ್ಯಾಯಕ್ಕಾಗಿ ಎಂದಿಗೂ ಪ್ರಾರ್ಥಿಸಬೇಡಿ, ಏಕೆಂದರೆ ನೀವು ಕೆಲವನ್ನು ಮಾತ್ರ ಪಡೆಯಬಹುದು’ ಎಂಬ ಕೆನಡಾದ ಕವಯತ್ರಿ ಹಾಗೂ ಪರಿಸರ ಹೋರಾಟಗಾರ್ತಿ ಮಾರ್ಗರೇಟ್ ಅಟ್‌ವೂಡ್ ಅವರ ಜನಪ್ರಿಯ ಸಾಲನ್ನು ಪ್ರತಿಕ್ರಿಯೆಯಾಗಿ ಉಲ್ಲೇಖಿಸಿದ್ದಾರೆ.

 

 

 ರಮ್ಯಾ ಅವರ ಈ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಜಾಲತಾಣಿಗರು, ‘ನ್ಯಾಯಕ್ಕಾಗಿ ಪ್ರಾರ್ಥಿಸಿದರೆ ಎಲ್ಲ ಸತ್ಯಗಳು ಹೊರ ಬರುವುದಿಲ್ಲ. ಹಾಗಾಗಿ ಸತ್ಯಕ್ಕಾಗಿ ಪ್ರಾರ್ಥಿಸಬೇಕಿದೆ. ಸತ್ಯ ಹೊರ ಬಂದರೆ ನ್ಯಾಯ ಖಂಡಿತ ಸಿಗುತ್ತದೆ’ ಎಂದು ಹೇಳಿದ್ದಾರೆ.

 

‘ಅದೃಷ್ಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟ ಬದಲಾಯಿಸುತ್ತವೆ. ಅದುವೇ ಕರ್ಮ’ ಎಂಬ ಬರಹದ ಜತೆಗೆ ‘ಜಸ್ಟಿಸ್’ ಎಂದು ಬರೆದು ನ್ಯಾಯದ ಪ್ರತೀಕ ತಕ್ಕಡಿಯ ಚಿಹ್ನೆಯನ್ನು ಅಂಕಿತಾ ಲೋಖಂಡೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು