ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಪ್‌ಲಾಕ್‌ ಅಂದ್ರೆ ಏನು?! ವಿವರಿಸಿದ ರಶ್ಮಿಕಾ, ವಿಜಯ್ ದೇವರಕೊಂಡ

Last Updated 12 ಜುಲೈ 2019, 13:05 IST
ಅಕ್ಷರ ಗಾತ್ರ

‘ಗೀತ ಗೋವಿಂದಂ’ ಚಿತ್ರದ ಲಿಪ್‌ಲಾಕ್‌ ದೃಶ್ಯಗಳ ಮೂಲಕ ಪಡ್ಡೆಗಳ ಹೃದಯದಲ್ಲಿ ಸ್ಥಾನ ಪಡೆದ ವಿಜಯ್ ದೇವರಕೊಂಡ, ‘ಲಿಪ್‌ಲಾಕ್‌’ ಅಂದರೆ ಏನು ಎಂದು ಪ್ರಶ್ನಿಸಿದ್ದಾರೆ! ಈ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಅವರ ಲಿಪ್‌ಲಾಕ್‌ ದೃಶ್ಯಗಳು ಭಾರಿ ಪ್ರಚಾರ ಗಿಟ್ಟಿಸಿದ್ದವು.

ವಿಜಯ್–ರಶ್ಮಿಕಾ ಜೋಡಿಯು ತಮ್ಮ ಹೊಸ ಸಿನಿಮಾ ‘ಡಿಯರ್‌ ಕಾಮ್ರೇಡ್‌’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿತ್ತು. ಸುದ್ದಿಗಾರರ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರಿಗೆ ಎದುರಾಗಿದ್ದು, ‘ನಿಮ್ಮ ಸಿನಿಮಾಗಳಲ್ಲಿ ಲಿಪ್‌ಲಾಕ್‌ ದೃಶ್ಯಗಳು ಹೆಚ್ಚಿರುತ್ತವಲ್ಲಾ, ಈ ಬಗ್ಗೆ ಏನು ಹೇಳುತ್ತೀರಿ’ ಎಂಬ ಪ್ರಶ್ನೆ.

ಇದಕ್ಕೆ ಉತ್ತರಿಸಿದ ವಿಜಯ್, ‘ಲಿಪ್‌ಲಾಕ್‌ ಅಂದರೆ ಏನು? ತುಟಿಗೆ ತುಟಿ ಸೇರಿಸಿ ಮುತ್ತು ಕೊಡುವುದು ಒಂದು ಭಾವನೆ. ಸಿಟ್ಟು ಎಂಬ ಭಾವನೆಯಂತೆಯೇ ಇದು ಕೂಡ. ಲಿಪ್‌ಲಾಕ್‌ ಎಂಬ ಪದ ನನಗೆ ಇಷ್ಟವಾಗುವುದಿಲ್ಲ. ಮುತ್ತು ಕೊಟ್ಟು ವ್ಯಕ್ತಪಡಿಸುವ ಭಾವನೆಯನ್ನು ಗೌರವಿಸಬೇಕು’ ಎಂದರು.

‘ಸಿನಿಮಾದ ಎರಡು ಪಾತ್ರಗಳ ನಡುವಿನ ಸಂಬಂಧವನ್ನು ತೋರಿಸಲು ಆ ದೃಶ್ಯಗಳು ಬೇಕು ಎಂದಾದರೆ, ಅದನ್ನು ಹಾಗೇ ತೋರಿಸಬೇಕಾಗುತ್ತದೆ’ ಎಂದರು ವಿಜಯ್.

ಅವರ ಮಾತಿಗೆ ದನಿಗೂಡಿಸಿದ ರಶ್ಮಿಕಾ, ‘ಭಾವನೆಗಳು ಹಲವಿವೆ. ಮುತ್ತು ಕೊಡುವುದು ಕೂಡ ಒಂದು ಭಾವನೆ. ಆ ಭಾವನೆಯನ್ನು ಹೇಗೆ ತೋರಿಸಬೇಕು ಎಂಬುದನ್ನು ನಿರ್ದೇಶಕರು ತೀರ್ಮಾನಿಸುತ್ತಾರೆ. ಸಿನಿಮಾ ಟ್ರೇಲರ್‌ ನೋಡಿ, ಅದರಲ್ಲಿ ಬರೀ ಕಿಸ್ಸಿಂಗ್ ದೃಶ್ಯಗಳು ಇವೆ ಎನ್ನುವವರು ಅಂಥ ದೃಶ್ಯಗಳನ್ನೇ ಬಯಸುತ್ತಿರುತ್ತಾರೆ. ಆದರೆ, ಸಿನಿಮಾ ಪೂರ್ತಿಯಾಗಿ ನೋಡಿದಾಗ ಆ ದೃಶ್ಯ ಏಕಿದೆ ಎಂಬುದು ಅರ್ಥವಾಗುತ್ತದೆ’ ಎಂದರು.

‘ವಿಜಯ್ ರಶ್ಮಿಕಾ ಅವರಿಗೆ ಮುತ್ತು ಕೊಡುವುದಿಲ್ಲ. ರಶ್ಮಿಕಾ ಕೂಡ ವಿಜಯ್‌ಗೆ ಮುತ್ತು ಕೊಡುವುದಿಲ್ಲ. ಸಿನಿಮಾ ಎರಡು ಪಾತ್ರಗಳು ಮುತ್ತು ಕೊಟ್ಟುಕೊಳ್ಳುತ್ತವೆ. ನಾವು ಸಿನಿಮಾದಲ್ಲಿ ಯಾಕೆ ಕಿಸ್‌ ಕೊಟ್ಟೆವು ಎಂಬುದನ್ನು ಇತರರಿಗೆ ವಿವರಿಸಿ ಹೇಳಬೇಕಾಗಿಲ್ಲ’ ಎಂದು ಖಡಕ್‌ ಆಗಿ ಹೇಳಿದರು ವಿಜಯ್. ‘ಕಿಸ್ ಕೊಡುವ ದೃಶ್ಯಗಳು ಒಂದು ವಿಷಯವೇ ಅಲ್ಲ’ ಎಂದರು ರಶ್ಮಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT