ಬೆಂಗಳೂರು: ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್ ಅವರು ನಿನ್ನೆ (ಜುಲೈ 6) 40ನೇ ಜನ್ಮದಿನ ಆಚರಿಸಿಕೊಂಡರು. ಈ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ ಹಾಗೂ ಸಾಕಷ್ಟು ಪರಿಶ್ರಮ ಹಾಕಿ ಮಾಡುತ್ತಿರುವ ‘ಧುರಾಂಧರ್’ ಹಿಂದಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಧುರಾಂಧರ್ ಫಸ್ಟ್ ಲುಕ್ ಹಲವು ವಿಷಯಗಳಿಂದ ಸಾಕಷ್ಟು ಗಮನ ಸೆಳೆದಿದೆ.

‘ಧುರಾಂಧರ್’ ಚಿತ್ರದ ನಾಯಕಿ ಸಾರಾ ಅರ್ಜುನ್ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. 40 ವರ್ಷದ ರಣವೀರ್ಗೆ 20 ವರ್ಷದ ಸಾರಾ ಅರ್ಜುನ್ ನಾಯಕಿಯಾಗಿದ್ದಾರೆ.

ಸಾರಾ ಅರ್ಜುನ್ ಯಾರು?

ಸಾರಾ ಅರ್ಜುನ್ 21ನೇ ತಿಂಗಳಿಗೇ ಬಾಲನಟಿಯಾಗಿ ಭಾರತದಲ್ಲಿ ಜನಪ್ರಿಯರಾದರು. ಎಲ್ಐಸಿ, ಮ್ಯಾಗಿ, ಮ್ಯಾಕ್ ಡೋನಾಲ್ಡ್ ಮುಂತಾದ ನೂರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.

ಆಗಲೇ ಸಾರಾ ಅರ್ಜುನ್ ಒಂದು ಜಾಹೀರಾತಿಗೆ ಸುಮಾರು ₹4 ಲಕ್ಷ ವರೆಗೆ ಸಂಭಾವನೆ ಪಡೆಯುತ್ತಿದ್ದರು. ಮುಂಬೈನಲ್ಲಿ 2005 ರಲ್ಲಿ ಜನಿಸಿರುವ ಸಾರಾ ನಟ ವಿಕ್ರಮ್ ಅರ್ಜುನ್ ಅವರ ಮಗಳು.

ವಿಶೇಷ ಎಂದರೆ ಸಾರಾ ಬಾಲನಟಿಯಿಂದ ಸಿನಿಮಾಗಳಲ್ಲಿ ನಾಯಕಿ ಪಾತ್ರ ಮಾಡಲು ಶುರು ಮಾಡುವುದಕ್ಕೂ ಮುನ್ನ ಉದ್ಯಮದಿಂದ ₹10 ಕೋಟಿಗೂ ಅಧಿಕ ಹಣ ಗಳಿಸಿದ್ದರು. ಅವರು ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿ ಪಾತ್ರ ನಿರ್ವಹಿಸಿ ಭರವಸೆ ನಟಿಯಾಗಿ ಗುರುತಿಸಿಕೊಂಡರು. ಸದ್ಯ ಅವರ ಮುಂದೆ ರಣವೀರ್ ಸಿಂಗ್ ಅಂತಹ ಖ್ಯಾತ ನಟನ ಜೊತೆ ನಾಯಕಿ ಆಗಿ ನಟಿಸುವ ದೊಡ್ಡ ಅವಕಾಶ ಸಿಕ್ಕಿದೆ.

‘ಧುರಾಂಧರ್’ ಬಗ್ಗೆ

‘ಧುರಾಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ಜತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.

‘ಧುರಾಂಧರ್’ ಚಿತ್ರ ಡಿಸೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

2019ರಲ್ಲಿ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ ನಿರ್ದೇಶಿಸಿದ್ದ ಆದಿತ್ಯ ಧರ್ ಅವರೇ ‘ಧುರಾಂಧರ್’ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ಪಾತ್ರದೊಂದಿಗೆ ರಣವೀರ್ ದೊಡ್ಡ ಪರದೆಗೆ ಮರಳಿದ್ದಾರೆ. ಜಿಯೊ ಸ್ಟುಡಿಯೋ ಈ ಸಿನಿಮಾ ನಿರ್ಮಿಸುತ್ತಿದೆ. ಅಂದ ಹಾಗೇ ಧುರಾಂಧರ್ ಎಂದರೆ ನಂಬಿಕಸ್ಥ. ಈ ಸಿನಿಮಾ ಸ್ಪೈ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ.
.ಅಸ್ಸಾಂ ಮೂಲದ ಈ ಚೆಲುವೆ ಅಮೆರಿಕದಲ್ಲಿ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿಯಾದರೇ?.ಸಿನಿಮಾ ವಿಮರ್ಶೆ: ಸಮಾಜಕ್ಕೆ ಕೈಗನ್ನಡಿಯಾಗುವ ‘ಹೆಬ್ಬುಲಿ ಕಟ್’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.