ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರುಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ನಟ ಕಿಚ್ಚನಿಗೆ ಶುಭಕೋರುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಾ.ಅಸ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕಿಚ್ಚನಿಗೆ ಟ್ವಿಟರ್‌ನಲ್ಲಿ ಹುಟ್ಟುಹಬ್ಬಕ್ಕೆ ಹರಸಿದ್ದಾರೆ. ‘ಕನ್ನಡ ಚಿತ್ರರಂಗವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ದೇವರು ಶಕ್ತಿ ನೀಡಲಿ’ ಎಂದು ಎಚ್‌ಡಿಕೆ ಹಾರೈಸಿದ್ದಾರೆ.
ಇನ್ನು ಸಿನಿರಂಗದಿಂದ ನಟರಾದ ಜಗ್ಗೇಶ್, ರವಿಚಂದ್ರನ್, ಉಪೇಂದ್ರ, ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಗಣೇಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ,ಡಾಲಿ ಧನಂಜಯ,ನೀನಾಸಂ ಸತೀಶ್, ರವಿಶಂಕರ್‌ಗೌಡ, ಡ್ಯಾನಿಷ್ ಸೇಟ್, ಕಬೀರ್ ದುಹಾನ್ ಸಿಂಗ್, ನಿರ್ದೇಶಕರಾದ ಅನೂಪ್ ಭಂಡಾರಿ, ಸತ್ಯಪ್ರಕಾಶ್, ಸಂತೋಷ್ ಆನಂದ್‌ರಾಮ್, ಸಿಂಪಲ್ ಸುನಿ, ತರುಣ್ ಸುಧೀರ್, ಪ್ರೀತಂ ಗುಬ್ಬಿ ಇನ್ನಿತರರು ಕಿಚ್ಚನಿಗೆ ಹಾರೈಸಿದ್ದಾರೆ. ಅದರಲ್ಲೂ ಸುನಿಯವರು ಕಿಚ್ಚನ ಗುಣಗಾನ ಮಾಡಿರುವ ಟ್ವೀಟ್ ಅನ್ನು ಏಳನೂರಕ್ಕೂ ಹೆಚ್ಚು ನೆಟ್ಟಿಗರು ರಿಟ್ವೀಟ್ ಮಾಡಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.
ನಟಿಯರಾದ ಸುಮಲತಾ ಅಂಬರೀಷ್, ರಚಿತಾ ರಾಮ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ, ರಾಗಿಣಿ ದ್ವಿವೇದಿ, ಮಿಲನಾ ನಾಗರಾಜ್, ನಿಶ್ವಿಕಾ ನಾಯ್ಡು, ನಭಾ ನಟೇಶ್, ಸನಾ ತಿಮ್ಮಯ್ಯ ಹಾಗೂ ಭಾರತೀಯ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಸುದೀಪ್‌ಗೆ ಅಭಿಮಾನದಿಂದ ಶುಭ ಹಾರೈಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.