ಕಿಚ್ಚ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರದ ಶೀರ್ಷಿಕೆಯನ್ನು ವಿಕ್ರಾಂತ್ ರೋಣ ಆಗಿ ಬದಲಿಸಲಾಗಿದೆ. ಹೊಸ ಶೀರ್ಷಿಕೆಯ ಲೋಗೊ ಹಾಗೂ ಟೀಸರ್ ಬಿಡುಗಡೆಯನ್ನು ಜನವರಿ 31ಕ್ಕೆ ದುಬೈನ ಬುರ್ಜ್ ಖಲೀಫಾದಲ್ಲಿ ಮಾಡಲು ನಿರ್ಧರಿಸಿದೆ ಚಿತ್ರತಂಡ. ಅಂದಿಗೆ ನಟ ಸುದೀಪ್ ಚಿತ್ರರಂಗಕ್ಕೆ ಕಾಲಿರಿಸಿ 25 ವರ್ಷ ಕಳೆಯುತ್ತದೆ.

ಶೀರ್ಷಿಕೆ ಬದಲಾವಣೆ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ ‘ಶೀರ್ಷಿಕೆ ಬದಲಾಯಿಸಲು ಕಾರಣ ಏನು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ನಿಮ್ಮಿಂದಾಗಿ ನಾವು ಶೀರ್ಷಿಕೆಯನ್ನು ಬದಲಾಯಿಸಿದ್ದೇವೆ. ಚಿತ್ರೀಕರಣದ ಮೊದಲ ದಿನ ಸುದೀಪ್ ಫೋಟೊ ಹಂಚಿಕೊಂಡು ವಿಕ್ರಾಂತ್ ರೋಣ ಕೆಲಸ ಆರಂಭಿಸಿದ್ದಾನೆ ಎಂದು ಬರೆದುಕೊಂಡಿದ್ದರು. ಚಿತ್ರದ ನೈಜ ಶೀರ್ಷಿಕೆಗಿಂತ ಅದೇ ಹೆಚ್ಚು ಟ್ರೆಂಡ್ ಸೃಷ್ಟಿಸಿತ್ತು. ಆ ಕಾರಣಕ್ಕೆ ನಾವು ಶೀರ್ಷಿಕೆ ಬದಲಿಸಿದ್ದೇವೆ. ವಿಕ್ರಾಂತ್ ರೋಣ ಶೀರ್ಷಿಕೆಯನ್ನು ಎಲ್ಲಿಂದಲೂ ಎರವಲು ಪಡೆದಿದ್ದಲ್ಲ ಎಂದು ಈ ಮೂಲಕ ಸ್ಪಷ್ಟೀಕರಣ ನೀಡುತ್ತಿದ್ದೇನೆ. ಇದು ನಮ್ಮ ಸಿನಿಮಾದ ಹೀರೊ ಹೆಸರು’ ಎಂದಿದ್ದಾರೆ.

ಚಿತ್ರದಲ್ಲಿ ನಿರೂಪ್ ಭಂಡಾರಿ ಸಂಜೀವ ಗಂಭೀರ್, ನೀತಾ ಅಶೋಕ್, ಸಿದ್ದು ಮೂಲಿಮನಿ, ರವಿಶಂಕರ್ ಗೌಡ, ಚಿತ್ಕಾಳ ಬಿರಾದಾರ್, ಮಧುಸೂದನ್ ಹಾಗೂ ರಮೇಶ್ ರೈ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಜಾಕ್ವೇಲಿನ್ ಫೆರ್ನಾಂಡಿಸ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿಲಿಯಂ ಡೇವಿಡ್ ಸಿನಿಮಾಟೊಗ್ರಫಿ ಮಾಡಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದ ಹೊಣೆ ಹೊತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.