ಶುಕ್ರವಾರ, ಮಾರ್ಚ್ 31, 2023
23 °C

ಹಾಲಿವುಡ್‌ ನಟ ವಿಲ್‌ ಸ್ಮಿತ್‌ ಅವರನ್ನು ಕ್ಷಮಿಸಬೇಕು ಎಂದ ಸೆರೆನಾ ವಿಲಿಯಮ್ಸ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಲಾಸ್‌ ಏಂಜಲೀಸ್‌: ಕಳೆದ ವರ್ಷ ಆಸ್ಕರ್‌ನಲ್ಲಿ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ ತಪ್ಪಿಗೆ ಹಾಲಿವುಡ್ ನಟ ವಿಲ್ ಸ್ಮಿತ್ ಅವರನ್ನು ಕ್ಷಮಿಸಬೇಕು ಎಂದು ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಅಭಿಪ್ರಾಯಪಟ್ಟಿದ್ದಾರೆ.

‘ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ತಮಾಷೆ ಮಾಡಿದ ಹಾಸ್ಯನಟ ಕ್ರಿಸ್ ರಾಕ್‌ಗೆ ವಿಲ್‌ ಸ್ಮಿತ್‌ ಕಪಾಳಕ್ಕೆ ಹೊಡೆದಿದ್ದರು. ಇದರ ಬಗ್ಗೆ ಮಾತನಾಡಿರುವ ಟೆನಿಸ್‌ ದಂತಕತೆ ಸೆರೆನಾ, ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಅವಕಾಶವನ್ನು ವಿಲ್‌ ಸ್ಮಿತ್‌ಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ’ ಈ ಬಗ್ಗೆ femalefirst.co.uk ವರದಿ ಮಾಡಿದೆ.


ವಿಲ್‌ ಸ್ಮಿತ್‌ ಮತ್ತು ಸೆರೆನಾ ವಿಲಿಯಮ್ಸ್‌ 

ವಿಲ್ ಮತ್ತು 'ಸಮ್ಮರ್ ಆಫ್ ಸೋಲ್'ನ ಆಸ್ಕರ್‌ ಸಂಭ್ರಮವನ್ನು ಒಂದು ಹೊಡೆತ ಹೇಗೆ ಹಾಳು ಮಾಡಿತು ಎಂಬುದರ ಬಗ್ಗೆ ಸೆರೆನಾ ವಿಷಾದ ವ್ಯಕ್ತಪಡಿಸಿದ್ದಾರೆ. ಆಸ್ಕರ್‌ನ ಅತ್ಯುತ್ತಮ ಸಾಕ್ಷ್ಯ ಪ್ರಶಸ್ತಿಯನ್ನು ‘ಸಮ್ಮರ್‌ ಆಫ್‌ ಸೋಲ್‌’ ಗೆದ್ದುಕೊಂಡಿತ್ತು. ‘ಸಮ್ಮರ್‌ ಆಫ್‌ ಸೋಲ್‌’ ಅನ್ನು ವಿಲ್‌ ಸ್ಮಿತ್‌ ನಿರ್ಮಾಣ ಮಾಡಿದ್ದರು.

‘ನಾವೆಲ್ಲರೂ ಪರಿಪೂರ್ಣರಲ್ಲ. ನಾವೆಲ್ಲರೂ ಮನುಷ್ಯರು. ನಾವು ಒಬ್ಬರಿಗೊಬ್ಬರು ದಯೆಯಿಂದ ವರ್ತಿಸೋಣ. ಹಾಗಾದರೆ, ಅದು ಮರೆತುಹೋಗಲಿದೆ’ ಎಂದು ಅವರು ಹೇಳಿದ್ದಾರೆ.

ಆಸ್ಕರ್‌ ಸಮಾರಂಭದಲ್ಲಿ ಕ್ರಿಸ್‌ ರಾಕ್‌ಗೆ ಹೊಡೆದಿದ್ದ ಘಟನೆಗೆ ಸಂಬಂಧಿಸಿದಂತೆ ವಿಲ್‌ ಸ್ಮಿತ್‌ ಅವರನ್ನು ಹತ್ತು ವರ್ಷಗಳ ಕಾಲ ಆಸ್ಕರ್‌ನಿಂದ ನಿಷೇಧಿಸಲಾಗಿದೆ.

ಇವುಗಳನ್ನೂ ಓದಿ 

ವಿಲ್ ಸ್ಮಿತ್ ಕೋಪಗೊಂಡು ಕೆನ್ನೆಗೆ ಹೊಡೆದಿದ್ದು ಇದೇ ಮೊದಲ ಬಾರಿಯಲ್ಲ!

Oscars 2022: ವೇದಿಕೆಯಲ್ಲಿ ಸಹನಟನ ಕೆನ್ನೆಗೆ ಹೊಡೆದಿದ್ದ ಸ್ಮಿತ್ ಕ್ಷಮೆಯಾಚನೆ

Oscars 2022: ವೇದಿಕೆ ಮೇಲೆ ಸಹ ನಟನ ಕೆನ್ನೆಗೆ ಹೊಡೆದ ನಟ ವಿಲ್‌ ಸ್ಮಿತ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು