ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.12ರಿಂದ ಸಿನಿಮಾ ಬಿಡುಗಡೆ, ವಿತರಣೆ ಮತ್ತು ಮಾರುಕಟ್ಟೆ ಕಾರ್ಯಾಗಾರ

Published 10 ಏಪ್ರಿಲ್ 2024, 20:30 IST
Last Updated 10 ಏಪ್ರಿಲ್ 2024, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಟೆಂಟ್‌ ಸಿನಿಮಾದಲ್ಲಿ ಚಲನಚಿತ್ರಗಳ ಬಿಡುಗಡೆ, ವಿತರಣೆ ಮತ್ತು ಮಾರುಕಟ್ಟೆ ಕುರಿತು ಏ.12ರಿಂದ ಮೂರು ದಿನಗಳ ಕಾರ್ಯಾಗಾರ ನಡೆಯಲಿದೆ. 

ಕಾರ್ಯಾಗಾರದಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌, ವೀರೇಶ್‌ ಸಿನಿಮಾಸ್‌ನ ಮಾಲೀಕ ಕೆ.ವಿ.ಚಂದ್ರಶೇಖರ್‌, ಜಿಯೋ ಸ್ಟುಡಿಯೋಸ್‌ ಮುಖ್ಯಸ್ಥ ಪರಮೇಶ್ವರ್‌ ಗುಂಡ್ಕಲ್‌, ಸಿನಿಮಾಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧೀಂದ್ರ ವೆಂಕಟೇಶ್‌ ಸೇರಿದಂತೆ ಜಾಹೀರಾತು, ಮಾರುಕಟ್ಟೆ ಕ್ಷೇತ್ರದ ತಜ್ಞರು ಭಾಗವಹಿಸಲಿದ್ದಾರೆ. ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾಗಳ ವಿತರಣೆ, ಡಬ್ಬಿಂಗ್‌ ಮತ್ತು ರಿಮೇಕ್‌ ಹಕ್ಕುಗಳು, ಸ್ಯಾಟಲೈಟ್‌ ವಿತರಣೆ, ಚಲನಚಿತ್ರೋತ್ಸವಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿನಿಮಾಗಳಿಗೆ ನೀಡುತ್ತಿರುವ ಸೌಲಭ್ಯಗಳು ಮತ್ತು ಒಟಿಟಿ ಡಿಜಿಟಲ್‌ ಹಕ್ಕುಗಳ ಬಗ್ಗೆ ಕಾರ್ಯಾಗಾರದಲ್ಲಿ ಭಾಗವಹಿಸಿ ಕಲಿತುಕೊಳ್ಳಬಹುದು ಎಂದು ಟೆಂಟ್‌ ಸಿನಿಮಾ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9900555255 ಅಥವಾ www.tentcinema.com ಗೆ ಭೇಟಿ ನೀಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT