ಮಾರ್ಚ್ 1ಕ್ಕೆ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಬಿಡುಗಡೆ

7

ಮಾರ್ಚ್ 1ಕ್ಕೆ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಬಿಡುಗಡೆ

Published:
Updated:

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರ ಮಾರ್ಚ್‌ 1ರಂದು ಬಿಡುಗಡೆಯಾಗಲಿದೆ. ನಿನ್ನೆ ಬಿಡುಗಡೆಯಾದ ಈ ಚಿತ್ರದ ಟ್ರೇಲರ್‌ ಯೂಟ್ಯೂಬ್ ಟ್ರೇಡಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ದರ್ಶನ್‌ ಅವರ ವಿಶೇಷ ಗೆಟಪ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶೈಲಜಾ ನಾಗ್‌ ಮತ್ತು ಬಿ. ಸುರೇಶ್‌ ನಿರ್ಮಾಣದ ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿತ್ತು. ವಿ. ಹರಿಕೃಷ್ಣ ಮತ್ತು ಪಿ. ಕುಮಾರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. 

‘ಯಜಮಾನ’ ಚಿತ್ರದ ಟ್ರೇಲರ್‌ ಪ್ರೇಕ್ಷಕರಲ್ಲಿ ದೊಡ್ಡಮಟ್ಟದ ಕ್ರೇಜ್‌ ಹುಟ್ಟಿಹಾಕಿರುವುದರಲ್ಲಿ ಗುಟ್ಟೇನಿಲ್ಲ. ಟ್ರೇಲರ್‌ನಲ್ಲಿ ದರ್ಶನ್‌ ಅವರ ನಟನೆ, ಡೈಲಾಗ್‌ಗಳು ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ. ಶತ್ರುಗಳನ್ನು ಹುಟ್ಟಡಗಿಸುವ ಬಗೆ, ಮಾಸ್ ಲುಕ್, ಗ್ರಾಮೀಣ ಪರಿಸರ, ಸಾಹಸ ದೃಶ್ಯಗಳು ಮೈನವಿರೇಳಿಸುತ್ತವೆ. ಹಾಡುಗಳೂ ಕೂಡ ಸೂಪರ್‌ ಹಿಟ್‌ ಆಗಿವೆ.

ಟ್ರೇಲರ್‌ ಬಿಡುಗಡೆಗೊಂಡ ಹನ್ನೆರಡು ಗಂಟೆಯಲ್ಲಿ ಟ್ರೇಲರ್‌ ಅನ್ನು ಐದು ಮಿಲಿಯನ್‌ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಒಂದೂವರೆ ವರ್ಷದ ಬಳಿಕ ದರ್ಶನ್‌ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !