‘ಯಜಮಾನ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ: ಫೆ. 10ಕ್ಕೆ ಟ್ರೇಲರ್ ಬಿಡುಗಡೆ

7

‘ಯಜಮಾನ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ: ಫೆ. 10ಕ್ಕೆ ಟ್ರೇಲರ್ ಬಿಡುಗಡೆ

Published:
Updated:
Prajavani

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಯಜಮಾನ’ ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ.

ಚಿತ್ರದ ಯಾವುದೇ ದೃಶ್ಯಗಳಿಗೆ ಮಂಡಳಿಯು ಕತ್ತರಿ ಪ್ರಯೋಗ ಮಾಡಿಲ್ಲ. ಜೊತೆಗೆ ಸಂಭಾಷಣೆಯನ್ನು ಮ್ಯೂಟ್ ಮಾಡಿಲ್ಲ ಎಂದು ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ. ಸುರೇಶ್ ತಿಳಿಸಿದ್ದಾರೆ.

ಈಗಾಗಲೇ, ಈ ಚಿತ್ರದ ನಾಲ್ಕು ಹಾಡುಗಳು ಬಿಡುಗಡೆಯಾಗಿದ್ದು ಸೂಪರ್ ಹಿಟ್ ಆಗಿವೆ. ಜೊತೆಗೆ, ಇದೇ 10ರಂದು ಡಿ ಬೀಟ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೊಪೆ ನಟಿಸಿದ್ದಾರೆ.

‘ಯಜಮಾನ ಚಿತ್ರದ ಹಾಡುಗಳಿಗೆ ಅಭಿಮಾನಿಗಳು ತೋರಿದ ಪ್ರೀತಿಗೆ ನಾನು ಆಭಾರಿ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಫೆ. 10ರಂದು ಬೆಳಿಗ್ಗೆ 10ಗಂಟೆಗೆ ಟ್ರೇಲರ್‌ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾ ಆಭಾರಿಯಾಗಿರುತ್ತೇನೆ’ ಎಂದು ದರ್ಶನ್‌ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !