ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

A Thursday ಟ್ರೈಲರ್‌: ಭಯೋತ್ಪಾದಕಿ ’ಯಾಮಿ ಗೌತಮ್‌’ ಗುರುವಾರ ಬಿಡುಗಡೆ

Last Updated 10 ಫೆಬ್ರುವರಿ 2022, 8:41 IST
ಅಕ್ಷರ ಗಾತ್ರ

ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿ, ಬಾಲಿವುಡ್’ನಲ್ಲಿ ಮಿಂಚುತ್ತಿರುವ ನಟಿ ಯಾಮಿ ಗೌತಮ್ (yami Gautam) ಅವರ ನೂತನ ಸಿನಿಮಾ ’ಎ ಥರ್ಸ್‌ಡೇ’(A Thursday) ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರದಲ್ಲಿ ಯಾಮಿ ಗೌತಮ್‌ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡರೂಅವರು ಭಯೋತ್ಪಾದಕಿ ಪಾತ್ರದಲ್ಲಿ ಮಿಂಚಿದ್ದಾರೆ. ಅವರು ಯಾಕೆ ಭಯೋತ್ಪಾದಕಿಯಾದರು?ಅವರ ಹಿಂದೆ ಯಾರಿದ್ದಾರೆ? ಎಂಬುದನ್ನು ತಿಳಿಯಲು ಸಿನಿಮಾ ನೋಡಲೇಬೇಕು ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

’ಎ ಥರ್ಸ್‌ಡೇ’ ಸಿನಿಮಾ ಫೆಬ್ರುವರಿ 17ರ ಗುರುವಾರ ಬಿಡುಗಡೆಯಾಗಲಿದೆ. ಒಟಿಟಿ ವೇದಿಕೆ ’ಹಾಟ್‌ಸ್ಟಾರ್‌’ನಲ್ಲಿ ಜಾಗತಿಕವಾಗಿ ತೆರೆಗೆ ಬರಲಿದೆ. ಅತುಲ್‌ ಕುಲಕರ್ಣಿ, ಡಿಂಪಲ್‌ ಕಪಾಡಿಯಾ, ನೇಹಾ ದೂಪಿಯಾ ಸೇರಿದಂತೆ ಹಲವರು ನಟಿಸಿದ್ದಾರೆ.

ಕೆಲ ತಿಂಗಳ ಹಿಂದೆ ಉರಿ ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಅವರನ್ನು ಯಾಮಿ ಗೌತಮ್‌ ಮದುವೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT