ಸೋಮವಾರ, ಮಾರ್ಚ್ 8, 2021
31 °C

ತಂದೆಯಾದ ಅನುಭವ ಹೇಳಿಕೊಳ್ಳಲಾಗದು ಎಂದ ಯಶ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಶ್ ತಮ್ಮ ನಟನೆಯ ಸಾಮರ್ಥ್ಯ ಏನು ಎಂಬುದನ್ನು ತಮ್ಮ ಸಿನಿಮಾಗಳ ಮೂಲಕ ತೋರಿಸಿ ಕೊಟ್ಟಾಗಿದೆ. ಅದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಪ್ರಶ್ನೆಗಳಾವುವೂ ಉಳಿದಿಲ್ಲ.

ಆಕ್ರೋಶ, ಪ್ರೀತಿ, ಫನ್‌... ಹೀಗೆ ಹತ್ತುಹಲವು ಭಾವನೆಗಳನ್ನು ಅಭಿನಯಿಸಿ ತೋರಿಸುವ ತಾಕತ್ತಿರುವ ಯಶ್ ಅವರಿಗೂ ವ್ಯಕ್ತಪಡಿಸಲು ಸಾಧ್ಯವಾಗದ ಭಾವವೊಂದು ಇದೆ. ಅದು ಯಾವುದು ಎಂಬುದನ್ನು ಯಶ್ ಅವರೇ ಹೇಳಿಕೊಂಡಿದ್ದಾರೆ.

‘ನಟನಾಗಿ ನನ್ನ ಕೆಲಸ ಭಾವನೆಗಳನ್ನು ವ್ಯಕ್ತಪಡಿಸುವುದು. ಆದರೆ ಮೊದಲ ಬಾರಿಗೆ ತಂದೆಯಾದ ಅನುಭವವನ್ನು ಹೇಳಿಕೊಳ್ಳಲು ಕೂಡ ನನ್ನಿಂದ ಆಗುತ್ತಿಲ್ಲ. ಅದೊಂದು ಬಹಳ ವಿಶಿಷ್ಟ ಅನುಭವ’ ಎಂದರು ಯಶ್. ಇದನ್ನೆಲ್ಲ ಅವರು ಹೇಳಿದ್ದು ನಗರದ ‘ಫೋರ್ಟಿಸ್‌ ಲಾ–ಫೆಮ್ಮೆ’ ಆಸ್ಪತ್ರೆಯ ಆವರಣದಲ್ಲಿ. ಪತ್ನಿ ರಾಧಿಕಾ ಮತ್ತು ತಮಗೆ ಕೆಲವು ದಿನಗಳ ಹಿಂದಷ್ಟೇ ಜನಿಸಿರುವ ಮಗಳನ್ನು ಮನೆಗೆ ಕರೆದೊಯ್ಯುವ ಮೊದಲು ಯಶ್ ಮಾತಿಗೆ ಸಿಕ್ಕಿದ್ದರು.

‘ನಾನು ತಾಯ್ತನಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ. ಆಸ್ಪತ್ರೆಯ ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ’ ಎಂದು ಹೇಳಿದರು ರಾಧಿಕಾ. ಅವರ ಪ್ರಕಾರ ಮಗಳು ಯಶ್ ಅವರಂತೆಯೇ ಕಾಣಿಸುತ್ತಿದ್ದಾಳೆ!

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ನಟ ಯಶ್‌ ಮಗಳ ಫೋಟೊ ವೈರಲ್‌

ಯಶ್ ಅವರು ಕೆಜಿಎಫ್‌ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ಈ ಬಾರಿಯ ವಿವಾಹ ವಾರ್ಷಿಕೋತ್ಸವವನ್ನು ರಾಧಿಕಾ ಅವರು ‘ಯಶ್ ಅವರ ಜೂನಿಯರ್‌ ವರ್ಷನ್’ ಜೊತೆ ಆಚರಿಸಲಿದ್ದಾರಂತೆ! ಹೆಣ್ಣು ಮಗುವಿಗೆ ಯಾವ ಹೆಸರು ಇಡಬೇಕು ಎಂಬುದನ್ನು ಯಶ್–ರಾಧಿಕಾ ಇನ್ನೂ ತೀರ್ಮಾನಿಸಿಲ್ಲ.

‘ಗಂಡು ಮಗು ಆದರೆ ಯಾವ ಹೆಸರು ಇಡಬೇಕು ಎಂಬುದನ್ನು ರಾಧಿಕಾ ತೀರ್ಮಾನಿಸಿ ಆಗಿತ್ತು. ಆದರೆ ಹೆಣ್ಣು ಮಗು ಜನಿಸಿದೆ. ನನಗೂ ಹೆಣ್ಣು ಮಗುವೇ ಬೇಕು ಅಂತ ಇತ್ತು. ಹೆಸರು ಏನಿಡಬೇಕು ಎಂಬುದನ್ನು ಇನ್ನಷ್ಟೇ ತೀರ್ಮಾನಿಸಬೇಕು’ ಎಂದರು ಯಶ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು