ಗುರುವಾರ , ಏಪ್ರಿಲ್ 9, 2020
19 °C
ಶ್ರೀಕಂಠೇಶ್ವರಸ್ವಾಮಿಯ ದರ್ಶನ ಪಡೆದ ಯಶ್‌ ದಂಪತಿ

ನಂಜನಗೂಡು | ಯಶ್ ದಂಪತಿಯಿಂದ ಹರಕೆ ಮುಡಿ ಸೇವೆ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ನಗರದ ಐತಿಹಾಸಿಕ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಬುಧವಾರ ಚಿತ್ರನಟ ಯಶ್–ರಾಧಿಕಾ ಪಂಡಿತ್ ದಂಪತಿ ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.

ಯಶ್‌ ದಂಪತಿ ತಮ್ಮ ಮಗಳ ಹರಕೆ ಮುಡಿ ಹಾಗೂ ತುಲಾಭಾರ ಸೇವೆ ಸಲ್ಲಿಸಿದರು. ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ದಂಪತಿಗೆ ಸ್ವಾಮಿಯ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಲಾಯಿತು.

ಯಶ್‌ ದಂಪತಿ ನೋಡಲು, ಅವರ ಜೊತೆ ಫೋಟೊ ತೆಗಿಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಅಂಗರಕ್ಷಕರು ತಡೆಗಟ್ಟಿದರು. ಇದರಿಂದ ಅಸಮಾಧಾನಗೊಂಡ ಹಲವರು ಮಾತಿನ ಚಕಮಕಿ ನಡೆಸಿದರು. ಮಧ್ಯಪ್ರವೇಶಿಸಿದ ಯಶ್, ಅಭಿಮಾನಿಗಳನ್ನು ಸಮಾಧಾನಪಡಿಸಿ, ಸೆಲ್ಫಿ ತೆಗೆಸಿಕೊಂಡರು.

ಪೊಲೀಸರು ಜನದಟ್ಟಣೆ ನಿಯಂತ್ರಿಸುವಲ್ಲಿ ಹೈರಾಣಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು