ಹುಟ್ಟುಹಬ್ಬದ ಸಂಭ್ರಮದಲ್ಲಿ ಯೋಗರಾಜ್ ಭಟ್‌ 

7

ಹುಟ್ಟುಹಬ್ಬದ ಸಂಭ್ರಮದಲ್ಲಿ ಯೋಗರಾಜ್ ಭಟ್‌ 

Published:
Updated:

ಬೆಂಗಳೂರು: ಚಂದನವನದ ಖ್ಯಾತ ನಿರ್ದೇಶಕ, ನಿರ್ಮಾಪಕ ಯೋಗರಾಜ್ ಭಟ್‌ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಈ ಹುಟ್ಟುಹಬ್ಬಕ್ಕೆ ಸಾಕಷ್ಟು ಮಂದಿ ಶುಭಕೋರಿದ್ದಾರೆ. 

ಮುಂಗಾರು ಮಳೆ ಚಿತ್ರದ ಮೂಲಕ ಖ್ಯಾತಿ ಗಳಿಸಿದ ಇವರು ಹಳೇ ಪಾತ್ರೆ ಹಳೇ ಕಬ್ಣ..., ಹೊಸ ಗಾನಾ ಬಜಾನಾ..., ಲೈಫು ಇಷ್ಟೇನೇ...ಯಕ್ಕಾ ರಾಜಾ ರಾಣಿ ನನ್ನ ಕೈಯೊಳಗೆ..., ಯಡವಟ್ಟಾಯ್ತು..., ಜಾಕಿ ಜಾಕಿ ಜಾಕಿ ಜಾಕಿ..., ಶಿವಾ ಅಂತ ಹೋಗುತ್ತಿದ್ದೆ... ಹೀಗೆ ವೈವಿಧ್ಯಮಯ ಗೀತಾ ರಚನೆಗಳ ಮೂಲಕ ಎಲ್ಲರ ಮನ ಸೆಳೆದಿದ್ದಾರೆ. 

ಪಂಚರಂಗಿ, ಡ್ರಾಮಾ, ಮನಸಾರೆ, ಗಾಳಿಪಟ, ಪರಮಾತ್ಮ, ಮುಗುಳ್ನಗೆ... ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ನಿರ್ದೇಶನದ ಮೂಲಕ ಚಂದನವನದಲ್ಲಿ ಸೈ ಎನಿಸಿಕೊಂಡಿದ್ದಾರೆ. 

ಇದೀಗ ಪಂಚತಂತ್ರ ಸಿನಿಮಾದಲ್ಲಿ ತೊಡಗಿರುವ ಯೋಗರಾಜ್‌ ಭಟ್ಟರು ಮುಂದಿನ ದಿನಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಇದನ್ನೂ ಓದಿ:
ಯೋಗರಾಜ್‌ ಭಟ್ ಜೊತೆಗೆ ಸುದೀರ್ಘ ಪಟ್ಟಾಂಗ

ಭಟ್ರರ ಪಂಚತಂತ್ರ ಸಿನಿಮಾದ ಪ್ರಥಮ ನೋಟ

ಭಟ್ಟರ ಹಾಡಿಗೆ ಸೋನಲ್, ವಿಹಾನ್ ಪ್ರಣಯ

‘ಮುಗುಳು ನಗೆ’ಯ ಮೂರು ಮುಖಗಳು
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !