ಮಂಗಳವಾರ, ಆಗಸ್ಟ್ 16, 2022
29 °C

ಯುವರತ್ನ ‘ನೀನಾದೆ ನಾ’ ಹಾಡು ಬಿಡುಗಡೆಗೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯುವರತ್ನ ಚಿತ್ರ ನಿರ್ಮಾಪಕರು (ಹೊಂಬಾಳೆ ಫಿಲ್ಮ್ಸ್‌) ಈ ವರ್ಷಾಂತ್ಯದಲ್ಲಿ ‘ಯುವರತ್ನ’  ಚಿತ್ರದ ಇನ್ನೊಂದು ಹಾಡು ‘ನೀನಾದೆ ನಾ’  ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಚಿತ್ರ ಹಾಡು ಬಿಡುಗಡೆಯ ಪೋಸ್ಟರ್‌ ಈಗಾಗಲೇ ಬಿಡುಗಡೆ ಆಗಿದೆ. ಡಿ. 25ರಂದು ಈ ಹಾಡು ಬಿಡುಗಡೆ ಆಗಲಿದೆ. ಅಂದ ಹಾಗೆ ಕನ್ನಡ– ತೆಲುಗು ಭಾಷೆಗಳಲ್ಲಿ ಈ ಹಾಡು ಮೂಡಿಬರಲಿದೆ.

ಪುನೀತ್‌ ರಾಜ್‌ಕುಮಾರ್‌ ಮತ್ತು ಸಯ್ಯೇಶಾ ಅವರು ಚಿತ್ರದ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಸಂತೋಷ್‌ ಆನಂದರಾಮ್‌ ನಿರ್ದೇಶಿಸುತ್ತಿದ್ದಾರೆ. ತಮನ್‌ ಎಸ್‌. ಅವರ ಸಂಗೀತವಿದೆ. ಹೊಸ ಚಿತ್ರದ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯುವರತ್ನದಲ್ಲಿ ಪುನೀತ್‌ ಅವದರದ್ದು ಕಾಲೇಜು ವಿದ್ಯಾರ್ಥಿಯ ಪಾತ್ರ. ಇದರಲ್ಲಿಯೂ ಸಯ್ಯೇಶಾ, ದನಂಜಯ, ದಿಗಂತ್‌ ಮಂಚಲೆ, ಸೋನುಗೌಡ, ಪ್ರಕಾಶ್‌ರಾಜ್‌, ಅರುಣ್‌ಗೌಡ, ಅರ್ಜುನ್‌ ಗೌಡ, ವಿಶಾಲ್‌ ಹೆಗ್ಡೆ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಪುನೀತ್‌ ಕೂಡಾ ಒಂದು ಸೋಲೋ ಹಾಡನ್ನು ಹಾಡಿದ್ದಾರೆ. ಈ ಚಿತ್ರವು 2021ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು