5.8 ಅಡಿ ಎತ್ತರವುಳ್ಳ ಬಾಲಿವುಡ್ ನಟ ಶಾರುಖ್ ಖಾನ್ 3 ಅಡಿಯ ಹೊಸ ಅವತಾರದಲ್ಲಿ ‘ಝೀರೊ’ ಸಿನಿಮಾದ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದರು.

ಜೀನ್ಸ್ ಪ್ಯಾಂಟ್ ಹಾಗೂ ಜ್ಯಾಕೆಟ್ನಲ್ಲಿ ಕತ್ರಿನಾ ಕೈಫ್ ಅವರನ್ನು ಕತ್ತೆತ್ತಿ ನೋಡುತ್ತಾ ಆಕೆಯ ಸೊಂಟವನ್ನು ಶಾರುಖ್ ಖಾನ್ ಹಿಡಿದು
ಕೊಂಡಿದ್ದರೆ, ಕೆಂಪು ಬಣ್ಣದ ಸ್ಲಿಟ್ ಗೌನ್ ಉಡುಪು ಧರಿಸಿದ್ದ ಕತ್ರಿನಾ, ಶಾರುಖ್ಗೆ ಮುತ್ತು ಕೊಡಲು ಮುಂದಾಗಿದ್ದರು. ಆ ದೃಶ್ಯಸೊಗಸಾಗಿ
ಕಂಡಿತ್ತು.

ಅದನ್ನುಸೂಕ್ಷ್ಮವಾಗಿ ಗಮನಿಸಿದಾಗ, 2016ರಲ್ಲಿ ಫ್ರೆಂಚ್ ಭಾಷೆಯಲ್ಲಿ ಬಿಡುಗಡೆಗೊಂಡ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಅಫ್ ಫಾರ್ ಲವ್’ನ ಪೋಸ್ಟರ್ಗೂ ‘ಝೀರೊ’ ಪೋಸ್ಟರ್ಗೂ ಸಾಮ್ಯತೆ ಕಂಡುಬರುತ್ತದೆ.

ಆ ಸಿನಿಮಾದಪೋಸ್ಟರ್ನಲ್ಲಿ, ನಾಯಕಿ ವರ್ಜಿನೆ ಎಫಿರಾ ಕೆಂಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆ ತನ್ನ ಕೈಗಳನ್ನು ಬೆನ್ನ ಹಿಂದೆ ಕಟ್ಟಿಕೊಂಡು ನಾಯಕ ಜೇನ್ ಡುರಾರ್ಡಿನ್ ಅವರನ್ನು ಮುದ್ದಾಡಲು ಮುಂದಾಗುವ ದೃಶ್ಯ ಪೋಸ್ಟರ್ನಲ್ಲಿದೆ. ಶಾರುಖ್ ಅಭಿನಯದ ಝೀರೊ ಸಿನಿಮಾದ ಪೋಸ್ಟರ್ ಸಹ ಅದೇ ಮಾದರಿಯಲ್ಲಿರುವುದು ಈಗ ಚರ್ಚೆಗೆ
ಗ್ರಾಸವಾಗಿದೆ.

‘ಝೀರೊ’ ಸಿನಿಮಾದ ನಿರ್ದೇಶಕ ಆನಂದ್ ಎಲ್. ರೈ, ‘ಅಫ್ ಫಾರ್ ಲವ್’ ಸಿನಿಮಾದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದ್ದಾರೆ ಎಂಬ ಚರ್ಚೆಗಳು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.