ಚಿತ್ರರಂಗದಲ್ಲಿ ಗಿಮಿಕ್ಗೆ ಮತ್ತೊಂದು ಹೆಸರೇ ನಿರ್ದೇಶಕ ಪ್ರೇಮ್ ಎನ್ನುವ ಮಾತು ಗಾಂಧಿನಗರಿಯಲ್ಲಿ ಚಾಲ್ತಿಯಲ್ಲಿದೆ. ತಮ್ಮ `ಪ್ರೇಮ್ ಅಡ್ಡಾ~ ಚಿತ್ರದ ಐಟಂ ಸಾಂಗ್ಗೆ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ರನ್ನು ಕರೆಸುವುದಾಗಿ ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಪ್ರೇಮ್ ಮತ್ತೆ ಸುದ್ದಿ ಮಾಡಿದ್ದಾರೆ.

ಈ ಬಾರಿ ಅವರು ಕಣ್ಣು ಹಾಕಿರುವುದು ನಟ ಸುದೀಪ್ ಮೇಲೆ. ಸದ್ಯ `...ಅಡ್ಡಾ~ದಲ್ಲಿ ಬಿಜಿಯಾಗಿರುವ ಪ್ರೇಮ್ ಮುಂದಿನ ವರ್ಷ ಸುದೀಪ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ಬುಧವಾರ ಸಂಜೆ ನಡೆದ `ವರದನಾಯಕ~ ಚಿತ್ರದ ಹಾಡುಗಳ ದನಿಮುದ್ರಿಕೆ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಪ್ರೇಮ್ರನ್ನು ವೇದಿಕೆಗೆ ಆಹ್ವಾನಿಸಿದಾಗ ಆರಂಭದಲ್ಲಿ ಹಿಂದೇಟು ಹಾಕಿದರು. ಎಲ್ಲಿ, ಹೇಗೆ ಸುದ್ದಿ ಮಾಡಬೇಕೆಂಬ ತಂತ್ರ ಅವರಿಗೆ ಕರಗತ. ವೇದಿಕೆಯನ್ನು ಅವರು ಅದಕ್ಕೆ ಚೆನ್ನಾಗಿಯೇ ಬಳಸಿಕೊಂಡರು.

ಸುದೀಪ್ ಜೊತೆಗೂಡಿ ಸಿನಿಮಾ ಮಾಡುತ್ತೇನೆ ಎಂದಷ್ಟೇ ಹೇಳಿದ ಪ್ರೇಮ್, ಅದರ ಸಂಪೂರ್ಣ ವಿವರವನ್ನು ಹೇಳುವ ದಿನಾಂಕ ಮತ್ತು ಸಮಯವನ್ನು ಮಾತ್ರ ಪ್ರಕಟಿಸಿ ಎಲ್ಲರನ್ನೂ ಕುತೂಹಲದಲ್ಲಿ ಮುಳುಗಿಸಿದರು.

ಮುಂದಿನ ಈ ಚಿತ್ರದ ಮಾಹಿತಿಯನ್ನು ಅವರು ಹೊರಹಾಕುವುದು ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಗೆ ಅಂತೆ. ಅಂದರೆ ಹೊಸ ವರ್ಷದ ಮೊದಲ ಕ್ಷಣ ಪ್ರೇಮ್ ಹೊಸ ಚಿತ್ರದ ಶೀರ್ಷಿಕೆ, ಸುದೀಪ್ ಒಳಗೊಂಡಂತೆ ತಾರಾಗಣದ ವಿವರ, ಕತೆಯ ಒಳಗುಟ್ಟುಗಳನ್ನು ಬಿಚ್ಚಿಡುತ್ತಾರಂತೆ. ಅಲ್ಲಿಯವರೆಗೂ ಕಾಯಿರಿ ಎನ್ನುವುದು ಪ್ರೇಮ್ರ ಎಂದಿನ ತಂತ್ರ.

ಅಂದಹಾಗೆ, ಹತ್ತಾರು ವರ್ಷಗಳಿಂದ ಸುದೀಪ್ ಚಿತ್ರರಂಗದಲ್ಲಿದ್ದರೂ ಪ್ರೇಮ್ ಕಣ್ಣಿಗೆ ಅವರು ಬಿದ್ದಿದ್ದು `ಈಗ~ ಸಿನಿಮಾ ನೋಡಿದ ಬಳಿಕವಂತೆ. `ಈಗ~ದಲ್ಲಿ ಸುದೀಪ್ ಅಭಿನಯ ನೋಡಿದ ಬಳಿಕ ಅವರೊಂದಿಗೆ ಸಿನಿಮಾ ಮಾಡಲೇಬೇಕೆಂಬ ಬಯಕೆ ಉಂಟಾಗಿದೆ. ಕೂಡಲೇ ಅವರು ಪೆನ್ನು ಕೈಗೆತ್ತಿಕೊಂಡು ಸುದೀಪ್ಗಾಗಿಯೇ ಕತೆ ಹೆಣೆದರಂತೆ. ಅದೀಗ ಸಂಪೂರ್ಣ ಚಿತ್ರಕಥೆಯ ಸ್ವರೂಪ ಪಡೆದುಕೊಂಡಿದೆ.

ಮತ್ತೊಂದು ವಿಶೇಷವೆಂದರೆ ಈ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗಲಿದೆಯಂತೆ. ಪ್ರೇಮ್ರಿಂದ ಈ ರೀತಿಯ ಘೋಷಣೆಗಳು ಹೊಸತಲ್ಲ. ಆದರೂ ಸುದೀಪ್ ನಟನೆಯಲ್ಲಿ ಅವರು ಆ್ಯಕ್ಷನ್ ಕಟ್ ಹೇಳಲಿರುವ ಚಿತ್ರ ಸಿನಿಪ್ರಿಯರಲ್ಲಿ ಕುತೂಹಲವನ್ನಂತೂ ಮೂಡಿಸಲಿದೆ.

2013ರ ಪ್ರೇಮ್ರ ಮೊದಲ ಚಿತ್ರವಾಗಿ ಇದು ಸೆಟ್ಟೇರುವ ಸಾಧ್ಯತೆ ಇದ್ದರೂ, ಸುದೀಪ್ಗೆ ಸದ್ಯ ಬಿಡುವಿಲ್ಲ. ಎನ್.ಕುಮಾರ್ ನಿರ್ಮಾಣದ ಚಿತ್ರವೊಂದರಲ್ಲಿ ಸ್ವತಃ ಆ್ಯಕ್ಷನ್ ಕಟ್ ಹೇಳುವ ಹೊಣೆಗಾರಿಕೆ ಹೊತ್ತುಕೊಂಡು ನಟಿಸಲಿರುವ ಸುದೀಪ್ ಯುಗಾದಿ ಹಬ್ಬದ ವೇಳೆಯೊಳಗೆ ಅದನ್ನು ಪ್ರಾರಂಭಿಸಲಿದ್ದಾರೆ. ಈ ಚಿತ್ರ ಕೂಡ ಮೂರು ಭಾಷೆಗಳಲ್ಲಿ ತಯಾರಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.