ಕಿರುತೆರೆಗೆ ಪ್ರವೇಶ ಪಡೆಯುವ ನಟಿಯರ ಪಟ್ಟಿಗೆ ಸಂಜನಾ ಹೊಸ ಸೇರ್ಪಡೆ. ಝೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಸಿಐಡಿ ಕರ್ನಾಟಕ’ದಲ್ಲಿ ಈಗ ಸಂಜನಾ ಅಭಿನಯಿಸಲಿದ್ದಾರೆ.

ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ವೀಕ್ಷಿಸಲು ತೆರಳಿದ್ದ ಪತ್ರಕರ್ತರ ಜತೆ ಧಾರಾವಾಹಿ ನಿರ್ಮಾಣ ತಂಡ ತನ್ನ ಅನುಭವ ಹಂಚಿಕೊಂಡಿತು. ಕಿರುತೆರೆ ವೀಕ್ಷಕರಿಗೆ ಕಾತರ, ಕುತೂಹಲ ಮೂಡಿಸುವಲ್ಲಿ ಕ್ರೈಂ ಸರಣಿಗಳು ಸಫಲವಾಗಿವೆ. ವಾಸ್ತವ ಘಟನೆಗಳನ್ನು ಆಧರಿಸಿ ಅವುಗಳಿಗೆ ಸಿನಿಮೀಯ ಟಚ್ ಕೊಟ್ಟು ನಿರ್ಮಿಸಿದ ‘ಸಿ.ಐ.ಡಿ. ಕರ್ನಾಟಕ’ ಜನಪ್ರಿಯತೆ ಪಡೆದಿದೆ ಎಂದು ಕಾರ್ಯಕ್ರಮ ಮುಖ್ಯಸ್ಥ ಸಿದ್ದು ಕಾಳೋಜಿ ಹೇಳಿದರು.

ಈ ಧಾರಾವಾಹಿಯನ್ನು ಈಗ ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅಭಿನಯಿಸಿದ್ದು ಸ್ಯಾಂಡಲ್ವುಡ್ ತಾರೆ ಸಂಜನಾ ಈ ಲಿಸ್ಟ್ಗೆ ಸೇರ್ಪಡೆಯಾಗಿದ್ದಾರೆ, ಸಿ.ಐ.ಡಿ. ಇನ್ಸ್ಪೆಕ್ಟರ್ ಆಗಿ ಅಭಿನಯಿಸಿರುವ ವೀಣಾ ಪೊನ್ನಪ್ಪ, ತೇಜ ಪೊನ್ನಪ್ಪ, ಲೋಕೇಶ್, ಹೇಮಂತ್ ಹಾಗೂ ಅಂಜಲಿ ಹಾಜರಿದ್ದರು.

ಈ ಧಾರಾವಾಹಿಗೆ ಕಥೆ, -ಚಿತ್ರಕಥೆ, ಸಂಭಾಷಣೆ ಬರೆಯುತ್ತಿರುವ ಚಂದ್ರ ಬಾರ್ಕೂರು ಇನ್ನಷ್ಟು ರೋಮಾಂಚಕ ಕಥಾವಸ್ತು ಸಿದ್ಧ ಮಾಡಿಟ್ಟುಕೊಂಡಿದ್ದಾರಂತೆ. ಆರಂಭದಲ್ಲಿ ಈ ಧಾರಾವಾಹಿಯನ್ನು ೩೦ ಕಂತುಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಇದರ ಜನಪ್ರಿಯತೆ ಗಮನಿಸಿ ಮತ್ತಷ್ಟು ಕಂತುಗಳಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಈ ತಂಡದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.