`ಕುಛ್ಕುಛ್ ಹೋತಾ ಹೈ~ ಚಿತ್ರದಲ್ಲಿ ಪಾಪ್ಕಾರ್ನ್ ಸಿಡಿದಂತೆ ಮಾತನಾಡುತ್ತಿದ್ದ, ಶಾರುಖ್ ಖಾನ್ ಮಗಳ ಪಾತ್ರ ನಿರ್ವಹಿಸಿದ್ದ ಸನಾ ಸಯೀದ್ಗೆ ಇದೀಗ 24ರ ಹರೆಯ.
ಹತ್ತು ವರ್ಷದವಳಿದ್ದಾಗ ಕರಣ್ ಜೋಹರ್ ನಿರ್ದೇಶನದ `ಕುಛ್ಕುಛ್ ಹೋತಾ ಹೈ~ ಚಿತ್ರದ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದ ಸನಾ, ಇದೀಗ `ಸ್ಟೂಡೆಂಟ್ ಆಫ್ ದಿ ಇಯರ್~ ಚಿತ್ರದಲ್ಲೂ ಮಿಂಚಿದ್ದಾಳೆ.

ಮೊದಲ ಚಿತ್ರದಲ್ಲಿ ಶಾರುಖ್, ಎರಡನೆಯ ಚಿತ್ರದಲ್ಲಿ ಸಲ್ಮಾನ್ ಜೊತೆಗೆ ನಟಿಸಿರುವ ಆನಂದ ಈ ಹುಡುಗಿಯದ್ದಂತೆ. ಇದೀಗ 14 ವರ್ಷಗಳ ನಂತರ ಮತ್ತೊಮ್ಮೆ ಅವಕಾಶ ದೊರೆತರೆ, ಈ ನಟರ ಎದುರಿಗೆ ನಟಿಸುವ ಆಸೆಯೂ ಇದೆಯಂತೆ ಹುಡುಗಿಗೆ!

`ನನಗೆ ಚಿತ್ರರಂಗದಲ್ಲಿ ಬಾಲ ಕಲಾವಿದೆಯಾಗಿಯೂ ಹಲವು ಅವಕಾಶಗಳು ಅರಸಿಬಂದಿದ್ದವು. ಆದರೆ ಎಲ್ಲಕ್ಕೂ ಕೈ ಚಾಚಲಿಲ್ಲ. ಬಾಚಿಕೊಂಡು ನಟಿಸಲಿಲ್ಲ. ಕಿರುತೆರೆಯಲ್ಲಿ ಪ್ರತಿಭೆಯ ಅನಾವರಣಕ್ಕೆ ಅವಕಾಶವಿದ್ದ ಪಾತ್ರಗಳಲ್ಲಿ ಕಾಣಿಸಿಕೊಂಡೆ. ಇದೀಗಲೂ ಹಲವು ಅವಕಾಶಗಳು ನನ್ನ ಮುಂದಿವೆ.

ಆದರೆ ಚಿತ್ರರಂಗದಲ್ಲಿ ಬಹುಕಾಲ ಉಳಿಯಬೇಕೆಂದರೆ ಸಂಖ್ಯಾತ್ಮಕವಾಗಿ ಅಲ್ಲ, ಗುಣಾತ್ಮಕವಾಗಿ ನಟಿಸಬೇಕು ಎಂಬ ಗುಟ್ಟು ತಿಳಿದಿದೆ~ ಎಂದೆಲ್ಲ ಲೆಕ್ಕಾಚಾರದಿಂದ ಮಾತನಾಡುವ ಈ ಹುಡುಗಿ ಸದ್ಯ ಕೆಲವು ಜಾಹೀರಾತುಗಳ ಚಿತ್ರೀಕರಣದಲ್ಲಿ ನಿರತಳಾಗಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.