ಬೆಂಗಳೂರು: ಕನ್ನಡದ ನಟಿ ಹಾಗೂ ರೂಪದರ್ಶಿ ಸಹರ್ ಅಫ್ಸಾ ಬಾಲಿವುಡ್ನ ಆಲ್ಬಮ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ರೂಪದರ್ಶಿಯಾಗಿರುವ ಸಹರ್ ಅಫ್ಸಾ ಈಗ ಬಾಲಿವುಡ್ನ ಖಳನಟ ಅಜಜ್ ಖಾನ್ ಜೊತೆ ಕುಚ್ ಇಸ್ ತರಹ್ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇದೀಗ ತಾನೆ ಸ್ಯಾಂಡಲ್ವುಡ್ ಪ್ರವೇಶಿಸಿರುವ ಸಹರ್ ಅಫ್ಸಾ ಬೀಗ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ರೂಪದರ್ಶಿಯಾದ ಇವರಿಗೆ ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿದ್ದು ಬಹಳ ಖುಷಿ ಕೊಟ್ಟಿದೆಯಂತೆ.