ಬೆಂಗಳೂರು: ನಟಿ ಅನನ್ಯಾ ಪಾಂಡೆ, ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಶುಕ್ರವಾರ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಒಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಫ್ರೆಂಚ್ ಫ್ರೈ ಹಿಡಿದುಕೊಂಡಿರುವ ಫೋಟೊ ಒಂದನ್ನು ಅವರು ಪೋಸ್ಟ್ ಮಾಡಿ, ನನಗೆ ಒಂದು ಬೊಕೆ ಫ್ರೆಂಚ್ ಫ್ರೈ ಮಾತ್ರ ಸಾಕು ಎಂದು ಅಡಿಬರಹ ನೀಡಿದ್ದಾರೆ.
ಅನನ್ಯಾ ಪೋಸ್ಟ್‌ಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಫ್ರೆಂಚ್ ಫ್ರೈ ಎಂದರೆ ನಮಗೂ ಇಷ್ಟ ಎಂದು ಅಭಿಮಾನಿಗಳು ಕೂಡ ಹೇಳಿದ್ದಾರೆ.
ಅನನ್ಯಾ ಅವರ ಮುಂದಿನ ಚಿತ್ರ ಗೆಹರಾಯಿನ್ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.