ಮುಂಬೈ:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯನ್ನು ಅನುಷ್ಕಾ ಶರ್ಮಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

ನಾವಿನ್ನು ಮೂವರು, ಜನವರಿ 2021ಕ್ಕೆ ಹೊಸ ಸದಸ್ಯ ಬರಲಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅನುಷ್ಕಾ ವಿರಾಟ್ ಕೊಹ್ಲಿಯೊಂದಿಗಿನ ಫೋಟೊ ಟ್ವೀಟಿಸಿದ್ದಾರೆ. ಇದೇ ಶೀರ್ಷಿಕೆ ಮತ್ತು ಫೋಟೊವನ್ನು ವಿರಾಟ್ ಕೊಹ್ಲಿ ಟ್ವಿಟರ್, ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

2017 ಡಿಸೆಂಬರ್‌ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು.

ಅನುಷ್ಕಾ ಶರ್ಮಾ 2018ರಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜತೆ ಜೀರೊ ಚಿತ್ರದಲ್ಲಿ ನಟಿಸಿದ್ದು ಆ ನಂತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.ಇತ್ತೀಚೆಗೆ ಪಾತಾಳ್ ಲೋಕ್ ಮತ್ತು ಬುಲ್‌ಬುಲ್ ವೆಬ್ ಸರಣಿಯಲ್ಲಿ ಅನುಷ್ಕಾ ನಟಿಸಿದ್ದರು.

ಶುಭ ಹಾರೈಸಿದ ಆರ್‌ಸಿಬಿ

ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ದಂಪತಿಗೆ ಆರ್‌ಸಿಬಿ ತಂಡ ಟ್ವಿಟರ್‌ನಲ್ಲಿ ಶುಭ ಹಾರೈಸಿದೆ. ಜನವರಿಯಲ್ಲಿ ಹೊಸ ಸದಸ್ಯನನ್ನು ಬರಮಾಡಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ- ಅನುಷ್ಕಾಳಿಗೆ ಶುಭಾಶಯಗಳು. ಇದಕ್ಕಿಂತ ಉತ್ಸಾಹ ಬೇರೇನಿದೆ. ದಂಪತಿಗಳಿಗೆ ಶುಭ ಹಾರೈಸಿ ಎಂದುಟ್ವೀಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.