ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್‌ನಲ್ಲಿ ಸಂಚರಿಸುವುದು ಎಂದರೆ ನನಗೆ ಭಯ: ಅಜಯ್ ದೇವಗನ್

ಅಕ್ಷರ ಗಾತ್ರ

ಬೆಂಗಳೂರು: ಹಿಂದಿ ಭಾಷೆ ಕುರಿತಂತೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಟ ಅಜಯ್ ದೇವಗನ್, ತಮಗಿರುವ ಭಯ ಒಂದರ ಕುರಿತು ಬಹಿರಂಗಪಡಿಸಿದ್ದಾರೆ.

ಅಜಯ್ ದೇವಗನ್ ಅಭಿನಯದ ‘ರನ್‌ವೇ 34‘ ಚಿತ್ರ ಬಿಡುಗಡೆಯಾಗಿದೆ. ಅವರು ಚಿತ್ರದ ನಟಿ ರಾಕುಲ್ ಪ್ರೀತ್ ಸಿಂಗ್ ಜತೆಗೆ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್‘ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ, ಅವರು, ಲಿಫ್ಟ್ ಕುರಿತ ಭಯವನ್ನು ಬಹಿರಂಗಪಡಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ, ನಾವು ಲಿಫ್ಟ್‌ನಲ್ಲಿ ಇರುವ ಸಂರ್ಭದಲ್ಲಿ ಒಮ್ಮೆಲೆ ಅದು ಕೈಕೊಟ್ಟಿತು. ಮತ್ತು ಮೂರನೇ ಮಹಡಿಯಿಂದ ವೇಗವಾಗಿ ನೆಲಮಹಡಿಗೆ ಸಾಗಿ ಅಪ್ಪಳಿಸಿತು. ಆ ಸಂದರ್ಭದಲ್ಲಿ ನನ್ನ ಜತೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ನಾವು ಒಂದೂವರೆ ಗಂಟೆಯಷ್ಟು ಸಮಯ ಲಿಫ್ಟ್‌ನೊಳಗಡೆಯೇ ಸಿಲುಕುವಂತಾಯಿತು ಎಂದು ಅಜಯ್ ಹೇಳಿದ್ದಾರೆ.

ಜತೆಗೆ, ಆ ಘಟನೆಯ ಬಳಿಕ, ಲಿಫ್ಟ್ ಕಂಡರೆ ಸಾಕಷ್ಟು ಭಯವಾಗುತ್ತದೆ. ಲಿಫ್ಟ್‌ನಲ್ಲಿ ಸಂಚರಿಸುವಾಗ ಏನಾದರೂ ಸಂಭವಿಸಬಹುದು ಎಂಬ ಭಯ ಕಾಡುತ್ತದೆ ಎಂದು ಅಜಯ್ ದೇವಗನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT