ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ವಿನ್ಯಾಸದ ಉಡುಪು ತೊಟ್ಟ ನಟಿ ಅನನ್ಯಾ ಪಾಂಡೆ: ಆನ್‌ಲೈನ್‌ನಲ್ಲಿ ಟ್ರೋಲ್!

ಟ್ರೋಲಿಗರಿಗೆ ಆಹಾರವಾಯಿತು ಲೈಗರ್ ಪ್ರಚಾರದಲ್ಲಿ ಅನನ್ಯಾ ಪಾಂಡೆ ತೊಟ್ಟ ಡ್ರೆಸ್
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರು ಲೈಗರ್ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಧರಿಸಿದ್ದ ಉಡುಪನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಅನನ್ಯಾ ಪಾಂಡೆ ಅವರು ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಹೊಸ ವಿನ್ಯಾಸದ ಕಪ್ಪು ಬಣ್ಣದ ಉಡುಪಿನಲ್ಲಿ ಅವರು ಮಿಂಚುತ್ತಿದ್ದರು.

ಆದರೆ, ಹೊಸ ಉಡುಗೆ ಧರಿಸಿ ಪೋಸ್ ಕೊಟ್ಟು ಫೋಟೊ ಪೋಸ್ಟ್ ಮಾಡಿದ ಕೂಡಲೇ ಕೆಲವರು ನಟಿಯನ್ನು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

ನಟಿಯ ಹೊಟ್ಟೆಯ ಭಾಗ ಕಾಣಿಸುತ್ತಿದೆ. ಸಭ್ಯ ಉಡುಪು ಧರಿಸಿಲ್ಲ. ಉರ್ಫಿ ಜಾವೇದ್‌ರಂತೆ ಉಡುಪು ಧರಿಸಿದ್ದಾರೆ ಎಂದೆಲ್ಲ ಅನಗತ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಆದರೆ ಅನನ್ಯಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ವಿಜಯ್ ದೇವರಕೊಂಡ ಜತೆಗಿನ ಲೈಗರ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT