ಬೆಂಗಳೂರು: ಆಕರ್ಷಕ ವಿನ್ಯಾಸದ ಜೀಬ್ರಾ ಪ್ರಿಂಟ್‌ನ ಉಡುಪು ಧರಿಸಿ ನಟಿ ದೀಪಿಕಾ ಪಡುಕೋಣೆ ಫೋಟೊಗೆ ಪೋಸ್ ಕೊಟ್ಟಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.
ಆದರೆ, ಅದೇ ಉಡುಪಿನಿಂದಾಗಿ ಅವರು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಶಕುನ್ ಬಾತ್ರಾ ನಿರ್ದೇಶನದ ಗೆಹ್ರೈಯಾನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟಿ ದೀಪಿಕಾ, ಅದೇ ಕಾರ್ಯಕ್ರಮದಲ್ಲಿ ಜೀಬ್ರಾ ಪ್ರಿಂಟ್ ಉಡುಪು ಧರಿಸಿ ಭಾಗವಹಿಸಿದ್ದರು.
ದೀಪಿಕಾ ಪತಿ ರಣವೀರ್ ಸಿಂಗ್ ಅವರು ವೈವಿಧ್ಯಮಯ ಫ್ಯಾಷನ್‌ಗೆ ಹೆಸರುವಾಸಿ. ಅವರ ವಿವಿಧ ರೀತಿಯ ಫ್ಯಾಷನ್ ಉಡುಗೆಗಳು ಹೊಸ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕಾಣಸಿಗುತ್ತವೆ. ಅದೇ ರೀತಿಯಲ್ಲಿ ದೀಪಿಕಾ ಕೂಡ ಸಾಗುತ್ತಿದ್ದಾರೆ ಎಂದು ನೆಟ್ಟಿಗರು ದೀಪಿಕಾ ಅವರ ಫೋಟೊಗೆ ಕಾಮೆಂಟ್ ಮಾಡಿದ್ದಾರೆ.