ನಟ ಸುರೇಶ್ ಗೋಪಿ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರ ಆ.15ರಂದು ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಪ್ರವೀಣ್ ನಾರಾಯಣನ್ ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೆ.ಫಣೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಸುರೇಶ್ ಗೋಪಿ ವಕೀಲ ‘ಡೇವಿಡ್ ಅಬೆಲ್ ಡೊನೊವನ್’ ಪಾತ್ರದಲ್ಲಿ ಮತ್ತು ನಟಿ ಅನುಪಮಾ ಪರಮೇಶ್ವರನ್ ‘ಜಾನಕಿ’ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯ ಪಿಳ್ಳೈ, ಶ್ರುತಿ ರಾಮಚಂದ್ರನ್, ಅಸ್ಕರ್ ಅಲಿ, ಮಾಧವ್ ಸುರೇಶ್ ಗೋಪಿ ಮತ್ತು ಬೈಜು ಸಂತೋಷ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳ ಭಾಷೆಯಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಕೇರಳ ಕಾನೂನು ವ್ಯವಸ್ಥೆಯ ಬಗ್ಗೆ ಸಿನಿಮಾದ ಕಥೆಯಿದ್ದು, ಜಾನಕಿ ಬಾಳಲ್ಲಿ ಒಂದು ಘಟನೆ ನಡೆಯುತ್ತದೆ. ನ್ಯಾಯಕ್ಕಾಗಿ ಹೋರಾಡುವ ಆಕೆಯ ಕಥೆಯನ್ನು ಕೋರ್ಟ್ ರೂಮ್ ಡ್ರಾಮಾ ಜಾನರ್ನಲ್ಲಿ ಹೇಳಲಾಗಿದೆ. ಈ ಸಿನಿಮಾ ಕಳೆದ ಜುಲೈ 17ರಂದು ತೆರೆಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.