ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಮಾರ್ಕೆಟ್‌ನಲ್ಲಿ ಸ್ನೇಕ್ ಡ್ಯಾನ್ಸ್ ಮಾಡಿದ ಜಾಹ್ನವಿ ಕಪೂರ್

ಅಕ್ಷರ ಗಾತ್ರ

ಬೆಂಗಳೂರು: ಕಪೂರ್ ಕುಟುಂಬದ ಕುಡಿಮತ್ತು ನಟಿ ಜಾಹ್ನವಿ ಕಪೂರ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ.

ಅಲ್ಲದೆ, ಸದಾ ಸುದ್ದಿಯಲ್ಲಿರುವ ಕಲೆ ಕೂಡ ಜಾಹ್ನವಿಯವರಿಗೆ ಕರಗತವಾಗಿದೆ.

ಈ ಬಾರಿ ಜಾಹ್ನವಿ ಕಪೂರ್ ಸೂಪರ್‌ಮಾರ್ಕೆಟ್ ಒಂದರಲ್ಲಿ ಸ್ನೇಕ್ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಜತೆಗೆ ವರುಣ್ ಧವನ್ ನೀಡಿರುವ ಚಾಲೆಂಜ್ ಅನ್ನು ಕೂಡ ಪೂರ್ತಿಗೊಳಿಸಿದ್ದಾರೆ.

ವರುಣ್ ಧವನ್ ಅವರ ‘ಜುಗ್ ಜುಗ್ಗ್ ಜೀಯೊ‘ ಚಿತ್ರದ ‘ದ ಪಂಜಾಬ್ಬನ್ ‘ ಹಾಡಿಗೆ ನೃತ್ಯ ಮಾಡುವಂತೆ ಜಾಹ್ನವಿಗೆ ಚಾಲೆಂಜ್ ಹಾಕಿದ್ದರು. ಅದರಂತೆ ಜಾಹ್ನವಿ ಸೂಪರ್‌ ಮಾರ್ಕೆಟ್‌ನಲ್ಲಿ ಅಪರಿಚಿತರ ಜತೆ ನೃತ್ಯ ಮಾಡಿದ್ದಾರೆ.

ತಮಾಷೆಯ ಈ ವಿಡಿಯೊವನ್ನು ಅವರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಜಾಹ್ನವಿ ವಿಡಿಯೊಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT