ಲೈವ್ ಟೆಲಿಕಾಸ್ಟ್ (ಹಾರರ್ ಸರಣಿ)

ತೆಲುಗು, ತಮಿಳು

ಪ್ರಸಾರ: ಡಿಸ್ನಿ+ ಹಾಟ್‌ಸ್ಟಾರ್, ಫೆ. 12

ಒಂಟಿ ಮನೆಯಲ್ಲಿ ಭೂತಗಳ ಚಿತ್ರೀಕರಣಕ್ಕೆ ಮುಂದಾಗುತ್ತಾ ನಿರ್ಮಾಪಕಿ ಎದುರಿಸುವ ಭಯಾನಕ ಸನ್ನಿವೇಶಗಳ ಕಥೆ ಇದು. ಕಾಜಲ್ ಅಗರ್‌ವಾಲ್ ಇಲ್ಲಿ ನಿರ್ಮಾಪಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೆಂಕಟ್ ಪ್ರಭು ಅವರ ನಿರ್ದೇಶನ ಇದೆ. ವೈಭವ್ ರೆಡ್ಡಿ, ಆನಂದಿ, ಪ್ರೇಂಜಿ ಅಮರನ್ ಇದ್ದಾರೆ

ಲೈಫ್ ಇನ್ ಎ ಇಯರ್ (ಚಲನಚಿತ್ರ)

ಪ್ರಸಾರ: ಅಮೆಝಾನ್ ಪ್ರೈಮ್ ವಿಡಿಯೋ, ಫೆ. 14

17 ವರ್ಷದ ಹುಡುಗನೊಬ್ಬನ ಪ್ರಿಯತಮೆ ಸತ್ತ ಬಳಿಕ ಅವನು ತನ್ನ ಇಡೀ ಬದುಕನ್ನು ಅವಳ ಕುಟುಂಬದವರು ಖುಷಿಯಾಗಿರುವಂತೆ ನೋಡಿ ಕೊಳ್ಳಲು ಬದ್ಧನಾಗುವ ನಾಯಕನ ಕಥೆಯನ್ನು ಒಳಗೊಂಡಿದೆ. ಜೆಫ್ರಿ ಆ್ಯಡಿಸ್ ಮತ್ತು ವಿಲ್ ಮ್ಯಾಥ್ಯೂ ಅವರ ಕಥೆಯನ್ನು ಮಿಟ್ಜ್ ಓಕೋರ್ನ್ ಅವರು ನಿರ್ದೇಶಿಸಿದ್ದಾರೆ.

ಟು ಆಲ್ ದಿ ಬಾಯ್ಸ್; ಆಲ್ವೇಸ್ ಆ್ಯಂಡ್ ಫಾರೆವರ್ (ಚಲನಚಿತ್ರ)

ಪ್ರಸಾರ: ನೆಟ್‌ಫ್ಲಿಕ್ಸ್, ಫೆ. 12

ನೋಯಾ ಮತ್ತು ಲಾನಾ ಕಂಡೋರ್ ಅವರು ನಿರ್ಮಿಸಿದ, ಜೆನ್ನಿ ಹ್ಯಾನ್ ಅವರ ಜನಪ್ರಿಯ ಕಾದಂಬರಿ ಆಧರಿತ ಚಿತ್ರವಿದು. ಹೈಸ್ಕೂಲ್ ವಿದ್ಯಾರ್ಥಿಯೊಬ್ಬನ ತ್ರಿಕೋನ ಪ್ರೇಮ ಕಥೆಯನ್ನು ಹೊಂದಿದೆ.

ದಿ ಬಿಗ್ ಡೇ

ಪ್ರಸಾರ: ನೆಟ್‌ಫ್ಲಿಕ್ಸ್, ಫೆ. 14

ನಿಶ್ಚಿತಾರ್ಥ ಮುಗಿಸಿದ ಆರು ಯುವ ಜೋಡಿಗಳು ತಮ್ಮ ಮದುವೆಯನ್ನು ಅದ್ದೂರಿಯಾಗಿ ಮಾಡುವ ಬಗ್ಗೆ ಯೋಜನೆ ಹಾಕುತ್ತಾರೆ. ತಮಾಷೆ, ನೃತ್ಯ, ಭಾವುಕತೆ ಎಲ್ಲವನ್ನೂ ಒಳಗೊಂಡ ಸರಣಿ ಇದು.

ನಮಸ್ತೆ ವಹಾಲ

ಪ್ರಸಾರ: ನೆಟ್‌ಫ್ಲಿಕ್ಸ್, ಫೆ. 14

ಇಂಡೋ– ನೈಜೀರಿಯನ್ ಚಿತ್ರವಿದು. ಅಂತರ್‌ವರ್ಣೀಯ ಜನರ ನಡುವಿನ ಪ್ರೇಮ, ಸಂಬಂಧವನ್ನು ಹಾಸ್ಯಮಯವಾಗಿ ಕಟ್ಟಿಕೊಟ್ಟಿದೆ. ಹಮಿಶಾ ದರ್ಯಾಣಿ ಅಹುಜಾ ಅವರು ನಿರ್ದೇಶಿಸಿದ್ದಾರೆ. ರಷ್ಯನ್ ತಾರೆಯರಾದ ಮುಮ್ತಾಜ್ ಮತ್ತು ಇನಿ ದಿಮಾ ಓಕೋಜಿ ನಟಿಸಿದ್ದಾರೆ.

ಕ್ರ್ಯಾಷ್

ಪ್ರಸಾರ: ಆಲ್ಟ್ ಬಾಲಾಜಿ ಮತ್ತು ಝೀ 5

ಕ್ರ್ಯಾಷ್ ಸರಣಿಯು ನಾಲ್ವರು ಒಡಹುಟ್ಟಿದವರ ಕಥೆಯನ್ನು ಹೊಂದಿದೆ. ಈ ಸಹೋದರರು ಬಾಲ್ಯದಲ್ಲೇ ಪ್ರತ್ಯೇಕವಾಗುತ್ತಾರೆ. ಅವರ ಹೆತ್ತವರು ಭೀಕರ ಅಪಘಾತವೊಂದರಲ್ಲಿ ಮೃತಪಟ್ಟ ಬಳಿಕ ಅವರು ಬೇರೆಯಾಗಬೇಕಾಗುತ್ತದೆ. ಅವರ ಜೀವನ ಹೇಗೆ ವಿವಿಧ ಸನ್ನಿವೇಶಗಳಲ್ಲಿ ಒಂದಕ್ಕೊಂದು ಸಂಬಂಧಿಸಿರುತ್ತದೆ ಎಂಬುದನ್ನು ಈ ಚಿತ್ರ ಹೇಳಿದೆ. ಅದಿಥಿ ಶರ್ಮಾ, ಅನುಷ್ಕಾ ಸೇನ್, ಝೈನ್ ಇಮಾಮ್, ಕುಂಜ್ ಆನಂದ್ ಮತ್ತು ರೋಹನ್ ಮೆಹ್ರಾ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.